ಮನೋರಂಜನೆ

ಅಭಿನಂದನ್ ಅವತಾರದಲ್ಲಿ ನಟಿ ಪಾರುಲ್ ಯಾದವ್

Pinterest LinkedIn Tumblr


ಬೆಂಗಳೂರು: ವರ್ಲ್ಡ್ ಕಪ್ ಮ್ಯಾಚ್ ಸಮೀಪಿಸುತ್ತಿದ್ದಂತೆ, ಭಾರತವನ್ನ ಮತ್ತು ಅಭಿನಂದನ್‌ರನ್ನ ಅಣಕಿಸುವಂತೆ ಪಾಕ್ ಅಗ್ಗದ ಜಾಹೀರಾತು ಮಾಡಿತ್ತು. ಈ ಜಾಹೀರಾತಿಗೆ ಟಾಂಗ್ ನೀಡುವಂತೆ ಭಾರತ ಕೂಡ ಹಲವು ಜಾಹೀರಾತುಳನ್ನ ಹರಿಬಿಟ್ಟಿತ್ತು.

ಆದ್ರೀಗ, ಡಿಫ್ರೆಂಟ್ ಆದ ವೇಷ ತೊಟ್ಟ ಸ್ಯಾಂಡಲ್‌ವುಡ್ ಬೆಡಗಿಯೊಬ್ಬಳು, ಅಭಿನಂದನ್ ರೀತಿ ವೇಷ ತೊಟ್ಟು, ಪಾಕ್‌ಗೆ ಟಾಂಗ್ ಕೊಡೋ ರೀತಿ ವೀಡಿಯೋ ಒಂದನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದಾರೆ.

ನಿನ್ನೆ ಪಾಕ್ ವಿರುದ್ಧ ಭಾರತ ಭರ್ಜರಿ ಜಯಗಳಿಸಿದ್ದರಿಂದ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋವೊಂದನ್ನ ಶೇರ್ ಮಾಡಿದ ನಟಿ ಪಾರುಲ್ ಯಾದವ್, ಅಭಿನಂದನ್ ರೀತಿ ಮೀಸೆ ಬಿಡಿಸಿಕೊಂಡು, ಪಾಕಿಸ್ತಾನಕ್ಕೆ ಅದರದ್ದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.

ನೀವು ಟೀ ಕಪ್ ಹಿಡ್ಕೋಳ್ಳಿ ನಾವು ವರ್ಲ್ಡ್ ಕಪ್ ತಗೋತಿವಿ ಎಂದು ಹೇಳಿದ ಪಾರುಲ್, ಪಾಕಿಸ್ತಾನದ ಅಗ್ಗದ ಜಾಹೀರಾತಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಸದ್ಯ ಈ ವೀಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ.

Comments are closed.