ಮುಂಬೈ: ಹೃತಿಕ್ ರೋಷನ್ ಅಭಿನಯದ ಕಹೋ ನಾ ಪ್ಯಾರ್ ಹೈ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದ ನಟಿ ಅಮಿಶಾ ಪಟೇಲ್ ಹಾಟ್ ಪೋಟೋಶೂಟ್ ಸದ್ದು ಮಾಡುತ್ತಿದೆ.
ತಮ್ಮ 42ನೇ ವಯಸ್ಸಿನಲ್ಲಿಯೂ ಕಿರಿಯ ನಟಿಯರನ್ನು ನಾಚಿಸುವಂತೆ ಅಮಿಶಾ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಿಂದ ಕೊಂಚ ದೂರವೇ ಉಳಿದಿರುವ ಪಟೇಲ್ 2018ರಲ್ಲಿ ‘ಭಯ್ಯಾಜಿ ಸೂಪರ್ ಹಿಟ್’ ಚಿತ್ರದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು.ಸೋಶಿಯಲ್ ಮೀಡಿಯಾ ಮೂಲಕವೇ ಅಭಿಮಾನಿಗಳನ್ನು ಅಮಿಶಾ ತಲುಪುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಅಮೀಶಾ, ದುಬೈನ ಮಾಲ್ವೊಂದರಲ್ಲಿಯ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ರು. ಅವರು ಈ ನ್ಯೂ ಲುಕ್ನಲ್ಲಿ ಕೊಂಚ ಬೋಲ್ಡ್ ಆಗಿ ಕಾಣಿಸಿಕೊಂಡು ಸಂತಸ ಹಂಚಿಕೊಂಡಿದ್ದರು. ಆದರೆ ಇದಕ್ಕೆ ಬಂದ ಕಮೆಂಟ್ ಗಳು ಎಲ್ಲೆ ಗಡಿ ಎಲ್ಲವನ್ನು ಮೀರಿದ್ದು ದೊಡ್ಡ ಸುದ್ದಿಯಾಗಿತ್ತು.