
ಬೆಂಗಳೂರು: ಕೊನೆಗೂ ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆಯನ್ನ ಖಾಲಿ ಮಾಡಿದ್ದಾರೆ. ಮನೆ ಬಾಡಿಗೆ ನೀಡಿಲ್ಲವೆಂದು ಯಶ್ ಮತ್ತು ಯಶ್ ತಾಯಿ ಪುಷ್ಪಾ ವಿರುದ್ಧ ಮನೆ ಮಾಲೀಕರು ಆರೋಪ ಮಾಡಿದ್ದರು.
2013ರಿಂದಲೂ ಯಶ್ ತಾಯಿ ಪುಷ್ಪಾ ವಿರುದ್ಧ ಮನೆ ಮಾಲೀಕರಾದ ಡಾ.ಮುನಿಪ್ರಸಾದ್ ಮತ್ತು ಡಾ.ವನಜಾ ಕಾನೂನು ಹೋರಾಟ ನಡೆಸಿದ್ದರು. ಅಲ್ಲದೇ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವ ಬಗ್ಗೆ ಕೂಡ ಮುನಿಪ್ರಸಾದ್- ವನಜಾ ಪರ ವಕೀಲರಾದ ಎಂ.ಟಿ.ನಾಣಯ್ಯ ಸಿದ್ಧತೆ ನಡೆಸಿದ್ದರು.
ಆದ್ರೆ ಇಂದು ಯಶ್ ಪರ ವಕೀಲರು ಮನೆಯ ಕೀಲಿಕೈಯನ್ನು ಮನೆ ಮಾಲೀಕರಿಗೆ ನೀಡಿ, ಎರಡು ತಿಂಗಳ ಬಾಡಿಗೆ ಎಂದು 80 ಸಾವಿರದ ಡಿಡಿಯನ್ನು ಹಸ್ತಾಂತರ ಮಾಡಿದ್ದಾರೆ.
Comments are closed.