ಮನೋರಂಜನೆ

ಯಾರ ಕೈಗೂ ಸಿಗದೇ ರಕ್ಷಿತ್ ಶೆಟ್ಟಿ ಊರಿನ ಕಡೆ ಹೊರಟಿದ್ದೇಕೆ?

Pinterest LinkedIn Tumblr


ಸ್ಯಾಂಡಲ್​ವುಡ್​ನ ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ ,ಕಿರಿಕ್​ ಪಾರ್ಟಿ ಚಿತ್ರದ ನಂತ್ರ ಸದ್ದು- ಸುದ್ದಿ ಇಲ್ಲದೇ ಕಳೆದೇ ಹೋಗ್ಬಿಟ್ಟಿದ್ರು.3 ವರ್ಷದಿಂದ ಒಂದು ಸಿನಿಮಾನೂ ತೆರೆಗೆ ಬಂದಿಲ್ಲ. ಸೋಶಿಯಲ್​ ಮೀಡಿಯಾದಲ್ಲೂ ಇರಲಿಲ್ಲ..ಆದ್ರೆ ಮೊನ್ನೆ ಮೊನ್ನೆಯಷ್ಟೇ ಸೋಶಿಯಲ್​ ಮೀಡಿಯಾಗೇ ವಾಪಸ್ಸಾದ ರಕ್ಷಿತ್ ಶೆಟ್ಟಿ, ಈ ಬಾರಿ ಹುಟ್ಟುಹಬ್ಬದ ಸಂದರ್ಭದಲ್ಲಾದ್ರೂ ಮಾತಿಗೆ ಸಿಗ್ತಾರೆ ಅನ್ಕೊಂಡ್ರೆ ಈಗ ಅದೂ ಇಲ್ಲ..

ಸ್ಯಾಂಡಲ್​ವುಡ್​ನ ಟ್ಯಾಲೆಂಟೆಡ್​ ಹೀರೋ ರಕ್ಷಿತ್ ಶೆಟ್ಟಿ, ತಮ್ಮದೇ ಅಭಿಮಾನಿ ಬಳಗವನ್ನ ಹೊಂದಿರೋ ಸ್ಟಾರ್ ನಟ..2016 ರಲ್ಲಿ ಕಿರಿಕ್ ಪಾರ್ಟಿಯಂತಹ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟು, ಕಣ್ಣಿಗೆ ಕಾಣದಂತೆ ಮಾಯವಾಗಿ ಬಿಟ್ರು..ಆ ನಂತ್ರ ಸುಮಾರು 3 ವರ್ಷ ರಕ್ಷಿತ್ ಶೆಟ್ಟಿ ಸಿನಿಮಾಗಳ ಸುದ್ದಿಯೇ ಇಲ್ಲ..ಹೀಗಿರುವಾಗ್ಲೇ ಕಳೆದ ಒಂದು ವರ್ಷದಿಂದ ಸೋಶಿಯಲ್​ ಮೀಡಿಯಾದಿಂದ್ಲೂ ದೂರವಾಗಿ ಬಿಟ್ರು..ಅಭಿಮಾನಿಗಳ ಮುಂದೆಯಾಗ್ಲಿ, ಮಾಧ್ಯಮಗಳ ಮುಂದೆಯಾಗ್ಲಿ ಕಾಣಿಸಿಕೊಳ್ಳಲೇ ಇಲ್ಲ..

ಆದ್ರೆ ಇಂದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಒಂದು ವರ್ಷದ ಬಳಿಕ ಮತ್ತೆ ಸೋಶಿಯಲ್​ ಮೀಡಿಯಾಗೇ ವಾಪಸ್ಸಾಗಿದ್ದಾರೆ.. ಒಂದ್ಕಡೆ ಈ ಸುದ್ದಿ ಅಭಿಮಾನಿಗಳಿಗೆ ಖುಷಿ ಕೊಟ್ರೂ, ಮತ್ತೊಂದ್ಕಡೆ ಬೇಸರ ಆಗಿರೋದು ಸತ್ಯ..ಯಾಕಂದ್ರೆ ಈ ಬಾರಿ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳದೇ, ಅಭಿಮಾನಿಗಳ ಕೈಗೂ ಸಿಗದೇ , ಸೈಲೈಂಟಾಗಿ ಊರಿನ ದಾರಿ ಹಿಡಿದಿದ್ದಾರೆ.

ಪ್ರತಿಬಾರಿ ಮಧ್ಯರಾತ್ರಿ 12 ಗಂಟೆಯಿಂದ್ಲೇ ರಕ್ಷಿತ್ ಮನೆಮುಂದೆ ಹಬ್ಬದ ವಾತಾರವರಣ ಸೃಷ್ಟಿಯಾಗ್ತಿತ್ತು.. ಆದರೆ ಈ ಬಾರಿ ರಕ್ಷಿತ್ ಶೆಟ್ಟಿ ಮನೆಮುಂದೆ ಯಾವುದೇ ಸಂಭ್ರಮಾನೂ ಇಲ್ಲ.. ಅಟ್ಲೀಸ್ಟ್ ಒಂದು ಪೋಸ್ಟರ್, ಫ್ಲೆಕ್ಸ್​ ಕೂಡ ಇಲ್ಲದೇ ಬಿಕೋ ಅಂತಿದೆ..

ಹಾಗಾದ್ರೆ ರಕ್ಷಿತ್ ಶೆಟ್ಟಿ ಈ ಬಾರಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳದೇ ಇರೋದಕ್ಕೆ ಕಾರಣ ಆದ್ರೂ ಏನು ಅನ್ನೋದಾದ್ರೆ, ಎಲ್ರಿಗೂ ಗೊತ್ತಿರೋ ಹಾಗೇ ರಕ್ಷಿತ್ ತಮ್ಮ ಲವ್​ ಬ್ರೇಕ್​ನಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ರು.. ಆ ಬಗ್ಗೆ ಒಂದಷ್ಟು ಸುದ್ದಿ , ಚರ್ಚೆಗಳು ಆಗಿದ್ವು..ಮತ್ತೊಂದ್ಕಡೆ 3 ವರ್ಷದಿಂದ ಯಾವುದೇ ಸಿನಿಮಾ ಬೇರೆ ತೆರೆಕಂಡಿಲ್ಲ.. ಹೀಗಿರುವಾಗ ಈ ಬಾರಿ ಬರ್ತ್ ಡೇಗೇನಾದ್ರೂ ಅಭಿಮಾನಿಗಳ ಕೈಗೆ ಅಥವಾ ಮಾಧ್ಯಮದವ್ರ ಕೈಗೆ ಸಿಕ್ರೆ, ಮತ್ತೆ ಮದುವೆ ಬಗ್ಗೆ , ಸಿನಿಮಾ ರಿಲೀಸ್​ ಬಗ್ಗೆ , ಹೀಗೆ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಕೊಡ್ಬೇಕಾಗುತ್ತೆ ಅಂತ್ಲೇ ತಪ್ಪಿಸಿಕೊಂಡಿರೋ ಹಾಗಿದೆ..

ಇದು ಒಂದು ಕಾರಣ ಅನ್ನಿಸಿದ್ರೆ ಮತ್ತೊಂದ್ಕಡೆ ,ಮಾತಿಗಿಂತ ಕೆಲಸ ಮಾಡಿ ತೋರ್ಸೊಣ ಅಂತ್ಲೂ ಸುಮ್ಮನಾಗಿದ್ದಾರೋ ಏನೋ? ಯಾಕಂದ್ರೆ ಈ ಮಾತಿಗೆ ಪೂರಕವಾಗೋ ಹಾಗೇ ಇಂದು ರಕ್ಷಿತ್ ಶೆಟ್ಟಿ ಸ್ವತ: ತಮ್ಮ ಟ್ವೀಟರ್ ಖಾತೆಯಲ್ಲಿ ಚಂಡಮಾರುತ ಬರೋಕ್ಕು ಮುನ್ನ ಪ್ರಶಾಂತತೆ ಇರುತ್ತದೆ ಅಂತ ಬರೆದುಕೊಂಡಿದ್ದಾರೆ.. ಹಾಗಾದ್ರೆ ಕನ್ನಡ ಇಂಡಸ್ಟ್ರಿಯಲ್ಲಿ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಮತ್ತೊಂದು ದೊಡ್ಡ ದಾಖಲೆ ಬರೆಯೋ ಸೂಚನೆ ಕೊಡ್ತಿದ್ದಾರೋ ಏನೋ?

ಅದೇನೇ ಇರ್ಲಿ.. ಇಂದು ರಕ್ಷಿತ್ ಶೆಟ್ಟಿ 35 ವಸಂತಗಳನ್ನ ಪೂರೈಸಿ 36 ನೇ ವರ್ಷಕ್ಕೆ ಕಾಲಿಡ್ತಿದ್ದಾರೆ..ಮುಂದಿನ ದಿನಗಳಲ್ಲಿ ಅವ್ರ ಪರ್ಸನಲ್ ಅಂಡ್ ಪ್ರೊಫೆಷನಲ್​ ಲೈಫ್ ಎರಡು ಚೆನ್ನಾಗಿರ್ಲಿ ಅಂತ ವಿಶ್ ಮಾಡೋಣ..

Comments are closed.