ಮನೋರಂಜನೆ

ಗಾಯಕ ಕಿಶೋರ್ ಕುಮಾರ್ ಮೊದಲ ಪತ್ನಿ, ಖ್ಯಾತ ನಟಿ ರುಮಾ ಗುಹಾ ಥಕುರ್ತಾ ನಿಧನ

Pinterest LinkedIn Tumblr

ಕೊಲ್ಕತಾ: ಖ್ಯಾತ ನಟಿ ಹಾಗೂ ಕೊಲ್ಕತ್ತಾದ ಯುವ ಕೋಯಿರ್ ಸಂಸ್ಥಾಪಕಿ ರುಮಾ ಗುಹಾ ಥಕುರ್ತಾ ಸೋಮವಾರ ಬೆಳಗ್ಗೆ ಬ್ಯಾಲಿಗಂಜ್ ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವಯಸ್ಸಾಗಿತ್ತು.

ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, 1934ರಲ್ಲಿ ಕೊಲ್ಕತಾದಲ್ಲಿ ಜನಿಸಿದ್ದರು . 1951ರಲ್ಲಿ ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರೊಂದಿಗೆ ಮದುವೆಯಾಗಿದ್ದರು. ನಂತರ 1960ರಲ್ಲಿ ವಿಚ್ಛೇದನ ನೀಡಿ ಅರುಪ್ ಗುಹಾ ಥಾಕುರ್ತಾ ಅವರನ್ನು ವಿವಾಹವಾಗಿದ್ದರು.

1958ರಲ್ಲಿ ಪ್ರಸಿದ್ಧ ಕೊಲ್ಕತಾ ಯುವ ಕೋಯಿರ್ ಸ್ಥಾಪಿಸಿದ್ದರು. ಅವರು ಅನೇಕ ಬಂಗಾಳಿ ಚಿತ್ರಗಳಲ್ಲಿ ಅಭಿನಯಿಸಿದ್ದು, “ಆಂಟನಿ ಫೈರಿಂಗಿ”, “ಗಂಗಾ ಒಭಿಜ್ಜಾನ್”, ಹಾಗೂ “ಪಲತಕ್” ಅವರ ಪ್ರಮುಖ ಚಿತ್ರಗಳಾಗಿವೆ. ಹಿನ್ನೆಲೆ ಗಾಯಕಿಯಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

Comments are closed.