ಮನೋರಂಜನೆ

ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ‘ಭಾರತ್’ ಜೂನ್ 5ಕ್ಕೆ ತೆರೆಗೆ

Pinterest LinkedIn Tumblr

ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಭಾರತ್ ಚಿತ್ರ ಈದ್ ಹೊತ್ತಿಗೆ ತೆರೆಗೆ ಬರಲಿದೆ. 1947ರಲ್ಲಿ ಭಾರತ ವಿಭಜನೆಯಾದ ನಂತರದ ಕಥೆ ಇದಾಗಿದ್ದು ಇದರಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಭರತ್ ನ 70 ವರ್ಷದ ಜೀವನ ಪಯಣವನ್ನು ಹೇಳಲಾಗುತ್ತಿದೆ.

ಚಿತ್ರದ ಟ್ರೈಲರ್ ನಲ್ಲಿ ಬಿಳಿ ಗಡ್ಡದ 70 ವರ್ಷದ ವೃದ್ಧನ ಪಾತ್ರದಲ್ಲಿ ಸಲ್ಮಾನ್ ಖಾನ್ ಒಬ್ಬರೇ ಬೈಕ್ ನಲ್ಲಿ ಬಂದ ನಾಲ್ವರ ಜೊತೆ ಎಡ, ಬಲ, ಮಧ್ಯದಿಂದ ಹೋರಾಡುವ ದೃಶ್ಯವಿದೆ.

ಭಾರತ್ ನ ಮೊದಲ ಟ್ರೈಲರ್ ಏಪ್ರಿಲ್ 22ರಂದು ಬಿಡುಗಡೆಯಾಗಿತ್ತು. ಇದು ಕೊರಿಯಾ ಚಿತ್ರ ‘ಆನ್ ಆಡ್ ಟು ಮೈ ಫಾದರ್’ ನ ರಿಮೇಕ್ ಆಗಿದೆ. ಇದರ ನಿರ್ದೇಶಕರು ಆಲಿ ಅಬ್ಬಾಸ್ ಜಫರ್.

ಚಿತ್ರದಲ್ಲಿ ಕತ್ರಿನಾ ಕೈಫ್, ದಿಶಾ ಪಟಾನಿ, ಸುನಿಲ್ ಗ್ರೋವರ್, ನೊರಾ ಫತೆಹಿ ಮತ್ತು ಜಾಕಿ ಶ್ರಾಫ್ ಅಭಿನಯಿಸಿದ್ದಾರೆ.

ವಿಶ್ವಾದ್ಯಂತ ಚಿತ್ರ ಜೂನ್ 5ಕ್ಕೆ ಬಿಡುಗಡೆಯಾಗಲಿದೆ.

Comments are closed.