
ಜೋಧ್ಪುರ್(ರಾಜಸ್ತಾನ್): ಬಾಲಿವುಡ್ ನಟ ಸಲ್ಮಾನ್ ಖಾನ್ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸೈಫ್ ಅಲಿಖಾನ್ ಹಾಗೂ ನಟಿಯರಾದ ಸೋನಾಲಿ ಬೇಂದ್ರೆ, ನೀಲಂ ಕೊಠಾರಿ, ಟಬುಗೆ ರಾಜಸ್ಥಾನ ಹೈಕೋರ್ಟಿನ ಜೋಧ್ಪುರ್ ಪೀಠ ಮತ್ತೊಮ್ಮೆ ಹೊಸದಾಗಿ ನೋಟಿಸ್ ಜಾರಿ ಮಾಡಿದೆ. 1998, ಅಕ್ಟೋಬರ್ 2ರಂದು ಜೋಧ್ಪುರನಲ್ಲಿ ‘ಹಮ್ ಸಾಥ್ ಸಾಥ್ ಹೈಂ’ ಸಿನಿಮಾದ ಚಿತ್ರೀಕರಣದ ವೇಳೆ ಕೃಷ್ಣಮೃಗ ಬೇಟೆ ಆಡಿದ ಆರೋಪ ಕೇಳಿ ಬಂದಿತ್ತು.
ಪ್ರಕರಣ ಸಂಬಂಧ ಈಗ ನೋಟಿಸ್ ನೀಡಲಾಗಿರುವ ಐವರನ್ನೂ ದೋಷಮುಕ್ತಗೊಳಿಸಿ 2018 ಏಪ್ರಿಲ್ 5 ರಂದು ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿತ್ತು. ಈ ತೀರ್ಪಿನ ವಿರುದ್ಧ ರಾಜಸ್ಥಾನ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನ ನಡೆಸಿದ ಜೋಧ್ಪುರ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಮನೋಜ್ ಗಾರ್ಗ್, ಈಗ ಈ ಐವರಿಗೂ ಮತ್ತೆ ಹೊಸದಾಗಿ ನೋಟಿಸ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕೃಷ್ಣಮೃಗ ಬೇಟಿ ವೇಳೆ ಸೈಫ್ ಅಲಿಖಾನ್ ಜೊತೆಯಲ್ಲಿದ್ದ ದುಷ್ಯಂತ್ ಸಿಂಗ್ ಅವರಿಗೂ ನೋಟಿಸ್ ನೀಡಲಾಗಿದೆ. ಅಲ್ಲದೇ ಎಂಟು ವಾರಗಳ ಬಳಿಕ ಈ ಪ್ರಕರಣದ ವಿಚಾರಣೆಯನ್ನ ನಡೆಸುವುದಾಗಿ ನ್ಯಾಯಾಧೀಶ ಗಾರ್ಗ್ ತಿಳಿಸಿದ್ದಾರೆ.
1998 ಅಕ್ಟೋಬರ್ 2 ರಂದು ಹಮ್ ಸಾಥ್ ಸಾಥ್ ಹೈಂ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಕೃಷ್ಣಮೃಗ ಬೇಟಿ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಪರಿಗಣಿಸಿ 5 ವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಲಾಗಿತ್ತು.
Comments are closed.