ನವದೆಹಲಿ: ಲೋಕಸಭೆ ಚುನಾವಣೆಗೆ ಕೊನೆಯ ಹಂತದ ಮತದಾನ ಮುಕ್ತಾಯ ಬಳಿಕ ದೇಶದೆಲ್ಲೆಡೆ ಮತದಾನೋತ್ತರ ಸಮೀಕ್ಷೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಇದೇ ವಿಚಾರವಾಗಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ವಿರುದ್ಧ ಕೀಳುಮಟ್ಟದ ಟ್ವೀಟ್ ಮಾಡಿ ಇದೀಗ ಟ್ವೀಟರಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
Haha! ? creative! No politics here….just life ??
Credits : @pavansingh1985 pic.twitter.com/1rPbbXZU8T
— Vivek Anand Oberoi (@vivekoberoi) May 20, 2019
ವಿವೇಕ್ ಒಬೆರಾಯ್ ಅವರು ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಆ ಫೋಟೋದಲ್ಲಿ ಐಶ್ವರ್ಯ ರೈ-ಸಲ್ಮಾನ್ ಖಾನ್, ಐಶ್ವರ್ಯ ರೈ-ವಿವೇಕ್ ಒಬೆರಾಯ್, ಐಶ್ವರ್ಯ ರೈ-ಅಭಿಶೇಕ್ ಬಚ್ಚನ್-ಪುತ್ರಿ ಇರುವುದನ್ನು ಶೇರ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಟ್ವೀಟರಿಗರು ಮಂಗಳಾರತಿ ಮಾಡಿದ್ದಾರೆ.
ವಿವೇಕ್ ಒಬೆರಾಯ್ ಇದು ಕೆಟ್ಟ ಅಭಿರುಚಿಯಿಂದ ಕೂಡಿದೆ. ಒಬ್ಬರ ವೈಯಕ್ತಿಕ ಜೀವನವನ್ನು ಇಲ್ಲಿ ಚರ್ಚಿಸಬಾರದು ಎಂದು ಟ್ವೀಟಿಸಿದ್ದಾರೆ.