ಮನೋರಂಜನೆ

ಚುನಾವಣೋತ್ತರ ಸಮೀಕ್ಷೆಗಳು ಕೇವಲ ಸುಳ್ಳಿನ ಕಂತೆ, ಕೆಲವು ದಿನಗಳವರೆಗೆ ಅವರು ಕನಸು ಕಾಣಲಿ: ಪ್ರಕಾಶ್ ರೈ

Pinterest LinkedIn Tumblr

ಬೆಂಗಳೂರು: ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ಕೇವಲ ಸುಳ್ಳಿನ ಕಂತೆ, ಕೆಲವು ದಿನಗಳವರೆಗೆ ಅವರು ಕನಸು ಕಾಣಲಿ, ನಾಗರಿಕರು ಈ ಎಕ್ಸಿಟ್ ಪೋಲ್ ಗಳನ್ನು ಸುಳ್ಳಾಗಿಸಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಖ್ಯಾತ ನಟ ಹಾಗೂ ಬೆಂಗಳೂರು ಕೇಂದ್ರ ಕ್ಶೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಹೇಳಿದ್ದಾರೆ.

ಭಾನುವಾರ ಹೊರಬಿದ್ದ ಚುನಾವಣೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್) ಗಳ ಪೈಕಿ ಬಹುತೇಕ ಎಲ್ಲಾ ಸಮೀಕ್ಷೆಗಳೂ ದೇಶದಲ್ಲಿ ಇನ್ನೊಮ್ಮೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಮರಳಲಿದೆ ಎಂದು ಹೇಳಿತ್ತು.

ಈ ಕುರಿತಂತೆ ಟ್ವೀಟ್ ಮಾಡಿರುವ ಪರ್ಕಾಶ್ ರೈ “ಎಕ್ಸಿಟ್ ಪೋಲ್ ಗಳು ಸುಳ್ಲಾಗಲಿದೆ” ಎಂದಿದ್ದಾರೆ.

“ಎಕ್ಸಿಟ್ ಪೋಲ್ ಗಳು ಸುಳ್ಲಾಗಲಿದೆ. ಅವರು ಕೆಲವಷ್ಟು ದಿನ ಕನಸು ಕಾಣಲಿ, ಆದರೆ ಆ ಸ್ವಪ್ನ ದೀರ್ಘವಾಗೇನೂ ಉಳಿಯುವುದಿಲ್ಲ. ನಂತರ ಅವರ ಪಾಲಿಗೆ ದುಃಸ್ವಪ್ನ ಮರುಕಳಿಸುತ್ತದೆ. ಗುರುವಾರ (ಮೇ 23) ಸಾರ್ವಜನಿಕರು ಈ ಸಮೀಕ್ಷೆಗಳನ್ನು ಸುಳ್ಲಾಗಿಸುತ್ತಾರೆ ಎಂಬ ನಂಬಿಕೆ ನನಗಿದೆ. ಅಲ್ಲಿಯ ತನಕ ಬಾಪೂಜಿ ನಮಗೆ ಕಲಿಸಿದಂತೆ ಹಾಡುತ್ತಾ ಸಂಭ್ರಮಿಸಿ” ಪ್ರಕಾಶ್ ರೈ ಹೇಳಿದ್ದಾರೆ.

ದೇಶದಲ್ಲಿ ಎನ್ಡಿಎ ಗೆ ಮುನ್ನೂರಕ್ಕೆ ಹೆಚ್ಚು ಸ್ಥಾನ, ರಾಜ್ಯದಲ್ಲಿ ಸಹ ಬಿಜೆಪಿಗೆ ಗರಿಷ್ಟ ಸ್ಥಾನ ಲಭ್ಯವಾಗಲಿದೆ ಎಂದು ಬಹುತೇಕ ಎಕ್ಸಿಟ್ ಪೋಲ್ ಗಳಲ್ಲಿ ಬಹಿರಂಗವಾಗಿದೆ.

Comments are closed.