ಕನ್ನಡದ ಪ್ರತಿಭಾವಂತ ನಟಿ ಎಂದು ಇತ್ತೀಚಿಗೆ ಖ್ಯಾತಿ ಪಡೆದಿರುವ ಹರಿಪ್ರಿಯಾ ನಟನೆಯ ‘ಸೂಜಿದಾರ’ ಚಿತ್ರವು ಬಿಡುಗಡೆಯಾಗಿದೆ. ಈ ಚಿತ್ರವು ಕರ್ನಾಟಕದಾದ್ಯಂತ ಬಹಳಷ್ಟು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರವು ಹಲವರ ಮೆಚ್ಚುಗೆ ಕೂಡ ಗಳಿಸಿದೆ. ಈ ಚಿತ್ರವನ್ನು ಮೌನೇಶ್ ಬಡಿಗೇರ್ ನಿರ್ದೇಶನ ಮಾಡಿದ್ದು, ಇದೊಂದು ಅಪೂರ್ವ ಕಲಾಕೃತಿಯಂತೆ ಇದೆ ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ.
ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿ ಹರಿಪ್ರಿಯಾ ನಟಿಸಿದ್ದು, ಉಳಿದ ಪೋಷಕ ಪಾತ್ರಗಳಲ್ಲಿ ಸುಚೇಂದ್ರ ಪ್ರಸಾದ್, ಅಚ್ಯುತ್ ಮತ್ತು ಬಹಳಷ್ಟು ಕಲಾವಿದರು ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಹಳಷ್ಟು ನಾಯಕಿ ಪ್ರಧಾನ ಚಿತ್ರಗಳಲ್ಲೇ ನಟಿಸುತ್ತಿರುವ ನಟಿ ಹರಿಪ್ರಿಯಾ ಅವರು ವಿಭಿನ್ನ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡು ಪ್ರತಿಭಾವಂತೆ ಎನಿಸಿಕೊಂಡಿದ್ದಾರೆ.
ಇದೀಗ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾನೂತ್ತಿರುವ ಸೂಜಿದಾರ ಚಿತ್ರದಲ್ಲೂ ಇಡೀ ಕಥೆ ನಟಿ ಹರಿಪ್ರಿಯಾ ಪಾತ್ರದ ಸುತ್ತವೇ ಸುತ್ತುತ್ತದೆ. ಹೀಗಾಗಿ ಸೂಜಿದಾರ ಚಿತ್ರವನ್ನು ಸಂಪೂರ್ಣವಾಗಿ ತಮ್ಮ ಹೆಗಲ ಮೇಲೆ ಹೊತ್ತು ನಡೆದಿದ್ದಾರೆ ನಟಿ ಹರಿಪ್ರಿಯಾ. ಹೀಗಾಗಿ ಈ ಮೊದಲು ಇದ್ದ ಸಾಕಷ್ಟು ಅವರ ಅಭಿಮಾನಿಗಳು ಈಗ ಇನ್ನಷ್ಟು ಜಾಸ್ತಿಯಾಗಿದ್ದಾರೆ. ಹರಿಪ್ರಿಯಾ ಈ ಚಿತ್ರದ ಬಿಡುಗಡೆ ಬಳಿಕ ತಮ್ಮ ಅಭಿಮಾನಿಗಳಲ್ಲಿ ಮತ್ತು ಸಿನಿಪ್ರಿಯರಲ್ಲಿ ಇಂದು ಮನವಿಯನ್ನು ಮಾಡಿಕೊಂಡಿದ್ದಾರೆ.
ತಮ್ಮ ಸೂಜಿದಾರ ಚಿತ್ರದ ಬಿಡಗಡೆ ಬಳಿಕ ಟ್ವೀಟರ್ ಪೇಜ್‌ನಲ್ಲಿ ಮೆಸೇಜ್ ಮಾಡಿರುವ ನಟಿ ಹರಿಪ್ರಿಯಾ “ಸೂಜಿದಾರ ಚಿತ್ರವು ಕರ್ನಾಟಕದಾದ್ಯಂತ ಬಿಡುಗಡೆಯಾಗಿದೆ. ನೀವೆಲ್ಲರೂ ದಯವಿಟ್ಟು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ನೋಡಿ. ಯಾರೂ ಈ ಚಿತ್ರದ ಪೈರಸಿ ಕಾಪಿಯನ್ನು ನೋಡಬೇಡಿ. ದಯವಿಟ್ಟು ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ. ನಾನು ನನಗೆ ಹತ್ತಿರವಿರುವ ವೀರೇಶ್ ಚಿತ್ರಮಂದಿರಕ್ಕೆ ಹೋಗುತ್ತೇನೆ. ನಾವೆಲ್ಲ ಅಲ್ಲಿ ಭೇಟಿಯಾಗೋಣ” ಎಂದು ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.
“ಚಿತ್ರವನ್ನು ಥೀಯೇಟರ್‌ಗಳಲ್ಲೇ ನೋಡಿ ನಮ್ಮ ಪ್ರಾಮಾಣಿಕ ಪ್ರಯತ್ನವನ್ನು ಬೆಂಬಲಿಸಿ” ಎಂದು ಪೈರಸಿ ವಿರುದ್ಧ ನಟಿ ಹರಿಪ್ರಿಯಾ ಮಾಡಿಕೊಂಡಿರುವ ಮನವಿಯನ್ನು ಬಹಳಷ್ಟು ಜನರು ಮೆಚ್ಚಿಕೊಂಡು ಹರಿಪ್ರಿಯಾ ಅವರ ಪ್ರತಿಭೆ ಜೊತೆಗೆ ಚಿತ್ರಂಗದ ಬಗೆಗಿರುವ ಅವರ ಪ್ರೀತಿ-ಕಾಳಜಿಯನ್ನು ಕೊಂಡಾಡಿದ್ದಾರೆ.