ಮನೋರಂಜನೆ

ಅಕ್ಷಯ ತೃತೀಯದಂದು ನಮ್ಮ ಅಮೂಲ್ಯ ಸಂಪತ್ತನ್ನು ನಿಮಗೆ ಪರಿಚಯಿಸುತ್ತೇವೆ ಎಂದ ರಾಧಿಕಾ ಪಂಡಿತ್

Pinterest LinkedIn Tumblr

ಬೆಂಗಳೂರು: ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಗಳನ್ನು ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಆದರೆ ಇಷ್ಟು ದಿನ ಈ ದಂಪತಿ ತಮ್ಮ ಪುತ್ರಿಯ ಫೋಟೋವನ್ನು ಬಹಿರಂಗಪಡಿಸಿರಲಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಕೇವಲ ಮಗುವಿನ ಕೈ, ಕಾಲಿನ ಚಿತ್ರವನ್ನಷ್ಟೇ ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಕುತೂಹಲವನ್ನು ಹಾಗೆಯೇ ಇರಿಸಿಕೊಂಡು ಬಂದಿದ್ದರು.

https://www.facebook.com/RadhikaPandit/posts/2654354181247788

ಇಂದು ರಾಧಿಕಾ ಪಂಡಿತ್ ತಮ್ಮ ಅಕೌಂಟ್ ನಲ್ಲಿ ಫೋಟೋವೊಂದನ್ನು ಹಾಕಿ, ನೀವೆಲ್ಲಾ ಬಹಳ ದಿನಗಳಿಂದ ಕಾಯುತ್ತಿದ್ದೀರಿ ಎಂದು ಗೊತ್ತು. ನಾಡಿದ್ದು ಅಕ್ಷಯ ತೃತೀಯದ ಶುಭದಿನದಂದು ನಮ್ಮ ಅಮೂಲ್ಯ ಸಂಪತ್ತನ್ನು ನಿಮಗೆ ಮತ್ತು ಇಡೀ ಜಗತ್ತಿಗೆ ಪರಿಚಯಿಸುತ್ತೇವೆ ಎಂದು ಬರೆದಿದ್ದಾರೆ.

Comments are closed.