ಮನೋರಂಜನೆ

ನಟಿ ಹರ್ಷಿಕಾ ಪೂಣಚ್ಚಗೆ ಸಂಬಂಧಿಕರ ನಿಶ್ಚಿತಾರ್ಥದಲ್ಲಿ ಕಿರುಕುಳ!

Pinterest LinkedIn Tumblr


ಮಡಿಕೇರಿ: ಸ್ಯಾಂಡಲ್‍ವುಡ್ ನಟಿ ಹರ್ಷಿಕಾ ಪೂಣಚ್ಚಗೆ ಸಂಬಂಧಿಕರ ನಿಶ್ಚಿತಾರ್ಥದಲ್ಲಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಮಡಿಕೇರಿಯ ನೀರುಕೊಲ್ಲಿ ಗ್ರಾಮದಲ್ಲಿನ ರೆಸಾರ್ಟ್ ನಲ್ಲಿ ಈ ಘಟನೆ ನಡೆದಿದ್ದು, ಬನ್ಸಿ ನಾಣಯ್ಯ ಮತ್ತು ಬಿಪಿನ್ ದೇವಯ್ಯ ಎಂಬವರು ಕಿರುಕುಳ ನೀಡಿದ್ದಾರೆ. ಗುರುವಾರ ರೆಸಾರ್ಟ್ ನಲ್ಲಿ ಸಂಬಂಧಿಕರ ನಿಶ್ಚಿತಾರ್ಥ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಹರ್ಷಿಕಾ ಜೊತೆ ಬನ್ಸಿ ನಾಣಯ್ಯ ಮತ್ತು ಬಿಪಿನ್ ದೇವಯ್ಯ ಅಸಭ್ಯವಾಗಿ ವರ್ತಿಸಿದ್ದರು.

ನಂತರ ಹರ್ಷಿಕಾ ಪೂಣ್ಣಚ್ಚ ಮತ್ತು ನಟ ಭುವನ್ ಇಬ್ಬರು ಬನ್ಸಿ ನಾಣಯ್ಯ ಮತ್ತು ಬಿಪಿನ್ ದೇವಯ್ಯ ಇಬ್ಬರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಬ್ಬರ ಮೇಲೆ ಐಪಿಸಿ ಸೆಕ್ಷನ್ 232, 242, 354 ಮತ್ತು 506 ಅಡಿಯಲ್ಲಿ ದೂರು ದಾಖಲಾಗಿತ್ತು.

ಗ್ರಾಮಾಂತರ ಪೊಲೀಸರು ಇಂದು ಬನ್ಸಿ ನಾಣಯ್ಯನನ್ನು ಬಂಧಿಸಿದ್ದು, ಮಡಿಕೇರಿ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇತ್ತ ತಲೆಮರೆಸಿಕೊಂಡಿರುವ ಬಿಪಿನ್ ದೇವಯ್ಯನಿಗಾಗಿ ಪೊಲೀಸರು ಶೋಧಕಾರ್ಯ ಶುರು ಮಾಡಿದ್ದಾರೆ. ಗುರುವಾರ ರಾತ್ರಿ ನಡೆದ ಘಟನೆಯಲ್ಲಿ ಭುವನ್ ಗಾಯಗೊಂಡಿದ್ದರು. ಆದ್ದರಿಂದ ರಾತ್ರಿಯೇ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಭುವನ್ ಬೆಂಗಳೂರಿಗೆ ತೆರಳಿದ್ದಾರೆ. ಹರ್ಷಿಕಾ ಪೂಣಚ್ಚ ಕೂಡ ಭುವನ್ ಜೊತೆಯಲ್ಲೇ ಬೆಂಗಳೂರಿಗೆ ಬಂದಿದ್ದಾರೆ.

Comments are closed.