ಮನೋರಂಜನೆ

ಮೋದಿ ಬಯೋಪಿಕ್ ಗೆ ಅನರ್ಹರು, ಅವರ ಮೇಲೆ ಕಾಮಿಡಿ ಸಿನಿಮಾ ಮಾಡಿ: ನಟಿ ಉರ್ಮಿಳಾ ಮಾತೋಂಡ್ಕರ್

Pinterest LinkedIn Tumblr


ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ಟೀಕಾಪ್ರಹಾರ ನಡೆಸಿರುವ ನಟಿ-ರಾಜಕಾರಣಿ ಉರ್ಮಿಳಾ ಮಾತೋಂಡ್ಕರ್ ಪ್ರಧಾನ ಮಂತ್ರಿ ಮೋದಿ ಕುರಿತಾಗಿ ಕಾಮಿಡಿ ಸಿನಿಮಾ ಮಾಡಬೇಕೆಂದು ಹೇಳಿದರು. ಸರ್ಕಾರದ ಮುಖ್ಯಸ್ಥರಾಗಿ ಜನರ ಆಶ್ವಾಸನೆಗಳನ್ನು ಈಡೇರಿಸಲು ಮೋದಿ ವಿಫಲರಾಗಿದ್ದು, ಆದ್ದರಿಂದ ಅವರು ಬಯೋಪಿಕ್ ಸಿನಿಮಾಗೆ ಅರ್ಹರಲ್ಲ ಎಂದು ಹೇಳಿದರು.

“ಮೋದಿ ಕುರಿತು ಮಾಡಿರುವ ಬಯೋಪಿಕ್ ಸಿನಿಮಾ ಪ್ರಧಾನಿಗೆ ಮಾಡಿದ ಜೋಕ್ ಆಗಿದೆ. 56 ಇಂಚಿನ ಎದೆಯುಳ್ಳವರೆಂದು ಹೇಳುವ ಪ್ರಧಾನಿ ಅವರು ಜನರ ಆಶ್ವಾಸನೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಅವರ ಮೇಲೆ ಮಾಡಿರುವ ಸಿನಿಮಾ ಪ್ರಜಾಪ್ರಭುತ್ವ, ಬಡತನ, ಮತ್ತು ಭಾರತದ ವೈವಿದ್ಯತೆ ಮೇಲೆ ಮಾಡಿರುವ ಜೋಕ್, ಬದಲಾಗಿ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸದ ಹಿನ್ನಲೆಯಲ್ಲಿ ಅವರ ಮೇಲೆ ಹಾಸ್ಯ ಸಿನಿಮಾವನ್ನು ಮಾಡಬೇಕೆಂದು ಎಂದು ಹೇಳಿದರು.

ಉರ್ಮಿಳಾ ಮಾತೊಂಡಕರ್ ಅವರು ಇತ್ತೀಚಿಗಷ್ಟೇ ರಾಜಕೀಯಕ್ಕೆ ಸೇರ್ಪಡೆಯಾಗಿದ್ದರು. ಆ ಮೂಲಕ ಅವರು ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದರು.ಕಾಂಗ್ರೆಸ್ ಪಕ್ಷವು ಅವರನ್ನು ಮುಂಬೈ ಉತ್ತರ ಭಾಗದ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.

Comments are closed.