ಮನೋರಂಜನೆ

ನಟಿ ಪೂನಂ ಕೌರ್ ಅಶ್ಲೀಲ ವಿಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಅಪ್ಲೋಡ್!

Pinterest LinkedIn Tumblr

ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಜನಸೇನಾ ಪಕ್ಷದ ವಿರುದ್ಧ ಮಾತನಾಡಿದ್ದ ತೆಲುಗು ನಟಿ ಪೂನಂ ಕೌರ್ ಅವರ ಅಶ್ಲೀಲ ಚಿತ್ರ, ವಿಡಿಯೋಗಳನ್ನು 50ಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್ ಗಳಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ನಟಿ ಪೊಲೀಸರಿಗೆ ದೂರು ನೀಡಿದ್ದಾರೆ.

ನಕಲಿ ಖಾತೆಗಳನ್ನು ಬಳಸಿ ಕಿಡಿಗೇಡಿಗಳು ನನ್ನ ತಿರುಚಲಾಗಿರುವ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿದೆ ಎಂದು ಪೂನಂ ಕೌರ್ ಸಿಟಿ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ.

ಪೂನಂ ಕೌರ್ ದೂರಿನನ್ವಯ ಸೈಬರ್ ಕ್ರೈಂ ಪೊಲೀಸರು ಕಿಡಿಗೇಡಿಗಳ ವಿರುದ್ಧ ಐಟಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೂನಂ ಕೌರ್ ಅವರು ಶೌರ್ಯಂ, ವಿನಾಯಾಕುಡು ಹಾಗೂ ಗಣೇಶ್ ಜಸ್ಟ್ ಗಣೇಶ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಬಂಧು ಬಳಗ ಚಿತ್ರದಲ್ಲೂ ನಟಿ ಅಭಿನಯಿಸಿದ್ದಾರೆ.

Comments are closed.