ಮನೋರಂಜನೆ

ಕೆಲಸ ಬೇಕೆಂದರೆ ಒಂದು ರಾತ್ರಿ ನನ್ನನ್ನು ಖುಷಿಪಡಿಸು ಎಂದ ನಿರ್ದೇಶಕರೊಬ್ಬರಿಗೆ ನಟಿ ಹೇಳಿದ್ದೇನು…?

Pinterest LinkedIn Tumblr

ಮುಂಬೈ: ಅವಕಾಶ ಬೇಕೆಂದರೆ ನಿರ್ದೇಶಕರ ಕಾಂಪ್ರಮೈಸ್ ಬೇಡಿಕೆಗೆ ಒಪ್ಪಿಕೊಳ್ಳಬೇಕೇ ವಿನಃ ಬೇರೆ ದಾರಿ ಇಲ್ಲ ಎಂದು ಹಲವು ನಟಿಯರು ತಮಗಾದ ಕಾಸ್ಟಿಂಗ್ ಕೌಚ್ ಕುರಿತ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಮಧ್ಯೆ ಕಿರುತೆರೆ ನಟಿಯೊಬ್ಬರು ನಿರ್ದೇಶಕನ ಕಾಂಪ್ರಮೈಸ್ ಗೆ ದಿಟ್ಟ ಉತ್ತರ ನೀಡಿ ಕಿರುತೆರೆಯಿಂದಲೇ ಹೊರಬಂದಿದ್ದಾರೆ.

ಕಿಚಡಿ, ಬಾ ಬಹು ಔರ್ ಬೇಬಿ ಹಾಗೂ ಮಿಸೆಸ್. ತೆಂಡೂಲ್ಕರ್ ಧಾರವಾಹಿಯಲ್ಲಿ ರಿಚಾ ಭದ್ರ ನಟಿಸಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ನಾನು ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ. ಮದುವೆಯಾದ ನಂತರ ಈ ಘಟನೆ ನಡೆದಿದೆ. ಕೆಲಸ ಬೇಕೆಂದರೆ ನನ್ನನ್ನು ಖುಷಿಪಡಿಸು ಎಂದು ನಿರ್ದೇಶಕರೊಬ್ಬರು ಕೇಳಿಕೊಂಡಿದ್ದುರ ಎಂದು ರಿಚಾ ಹೇಳಿದ್ದಾರೆ.

ಮದುವೆ ನಂತರ ನಾನು ಹಲವು ಆಡಿಶನ್ ಗೆ ಹೋದಾಗ ಸಾಕಷ್ಟು ಮಂದಿ ಕಾಂಪ್ರಮೈಸ್ ಮಾಡಿಕೋ ಎಂಬುದಾಗಿ ಹೇಳಿದ್ದರು. ಆದರೆ ಕಾಂಪ್ರಮೈಸ್ ಮಾಡಿಕೊಂಡು ಜೀವನ ಹಾಳು ಮಾಡಿಕೊಳ್ಳುವುದಕ್ಕೆ ನಟಿಸುವುದನ್ನೇ ಬಿಟ್ಟು ಹೊರಬಂದೆ ಎಂದು ಹೇಳಿಕೊಂಡಿದ್ದಾರೆ.

Comments are closed.