ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ತಮ್ಮ ಪತ್ನಿ ಕರೀನಾ ಕಪೂರ್ ಹಾಗು ಮಗ ತೈಮೂರ್ ಖಾನ್ ಜೊತೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಕ್ಯಾಮೆರಾಮೆನ್‍ಗಳು ತೈಮೂರ್ ಫೋಟೋ ಕ್ಲಿಕ್ಕಿಸಲು ಮುಂದಾದಾಗ ನಿಲ್ಲಿಸಿ, ಇಲ್ಲದಿದ್ರೆ ನನ್ನ ಮಗ ಕುರುಡ ಆಗ್ತಾನೆ ಎಂದು ಗರಂ ಆಗಿದ್ದಾರೆ.
ಸೈಫ್ ಅಲಿ ಖಾನ್, ಕರೀನಾ ಹಾಗೂ ತೈಮೂರ್ ಮೂವರು ಪಟೌಡಿಯಲ್ಲಿ ಇರುವ ತಮ್ಮ ಹಿರಿಯರ ಮನೆಗೆ ಭೇಟಿ ನೀಡಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಸೈಫ್ ತಮ್ಮ ಹೆಗಲ ಮೇಲೆ ತೈಮೂರ್ ನನ್ನು ಕುಳ್ಳಿರಿಸಿಕೊಂಡು ನಡೆದುಕೊಂಡು ಬರುತ್ತಿದ್ದರು.
ಈ ವೇಳೆ ಅಲ್ಲಿ ನಿಂತಿದ್ದ ಕ್ಯಾಮೆರಾಮೆನ್‍ಗಳನ್ನು ನೋಡಿ ತೈಮೂರ್ ಕೈ ಬೀಸಿದ್ದಾನೆ. ಆಗ ಕ್ಯಾಮೆರಾಮೆನ್‍ಗಳು ಆತನ ಫೋಟೋ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಸೈಫ್ ಕೋಪದಿಂದ ನಿಲ್ಲಿಸಿ, ಇಲ್ಲದಿದ್ರೆ ನನ್ನ ಮಗ ಕುರುಡ ಆಗುತ್ತಾನೆ ಎಂದು ಹೇಳಿದರು.
ಸೈಫ್ ಹಾಗೂ ತೈಮೂರ್ ಜೊತೆ ಕರೀನಾ ಕಪೂರ್ ಕೂಡ ಬರುತ್ತಿದ್ದರು. ಆಗ ಛಾಯಾಗ್ರಾಹಕರು ಫೋಟೋಗೆ ಪೋಸ್ ನೀಡಲು ಕೇಳಿದರು. ಈ ವೇಳೆ ಸೈಫ್ “ನಿಮಗೆ ಫೋಟೋ ಬೇಕೆಂದರೆ ಕ್ಲಿಕ್ಕಿಸಿಕೊಳ್ಳಿ, ಅದನ್ನು ಬಿಟ್ಟು ಪೋಸ್ ಎಂದು ಹೇಳಬೇಡಿ. ಪೋಸ್ ಕೊಡುವುದು ಸ್ವಲ್ಪ ವಿಚಿತ್ರ ಎಂದು ಅನಿಸುತ್ತದೆ” ಎಂದು ಪ್ರತಿಕ್ರಿಯಿಸಿದರು.
Comments are closed.