ಮನೋರಂಜನೆ

ಅಂಬರೀಶ್ ಅಣ್ಣನಿಗೆ ಒಬ್ಬರೇ ಪತ್ನಿ: ಕುಮಾರಸ್ವಾಮಿಗೆ ಯಶ್ ಪರೋಕ್ಷ ಟಾಂಗ್!

Pinterest LinkedIn Tumblr


ಮಂಡ್ಯ: ಮಂಡ್ಯ ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ಕಾವು ಹೆಚ್ಚಾಗುತ್ತಿದ್ದು ವಾಗ್ವಾದ, ಆರೋಪ-ಪ್ರತ್ಯಾರೋಪ ಹೆಚ್ಚಾಗುತ್ತಿದೆ. ಈ ಮಧ್ಯೆ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧಿಸುತ್ತಿದ್ದು ಅವರ ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಪ್ರಚಾರ ವೇಳೆ ಯಶ್ ಅಂಬರೀಶ್ ಅಣ್ಣನಿಗೆ ಇರೋದು ಒಬ್ಬರೇ ಹೆಂಡತಿ. ಅದು ಯಾರಂತ ಇಡೀ ಕರ್ನಾಟಕಕ್ಕೆ ತಿಳಿದಿದೆ. ಚುನಾವಣೆಯಲ್ಲಿ ಸುಮಲತಾ ಹೆಸರಿನ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಾಕ್ಷಣ ಜನರು ಗೊಂದಲಕ್ಕೀಡಾಗುವುದಿಲ್ಲ. ಮಂಡ್ಯ ಜನರಿಗೂ ಗೊತ್ತ ಅಂಬರೀಶ್ ಅವರ ಧರ್ಮಪತ್ನಿ ಯಾರು ಎಂದು ಹೇಳಿದ್ದಾರೆ.
ಇದೇ ವೇಳೆ ಹೌದಪ್ಪ, ನನಗೆ ಮನೆ ಬಾಡಿಗೆ ಕಟ್ಟೋ ಯೋಗ್ಯತೆ ಇಲ್ಲ, ಆದರೆ ಕೊಪ್ಪಳ ಜನತೆಗೆ ಏನು ಮಾಡಿದ್ದೇನೆ ಎಂಬುದನ್ನು ಕೇಳಿ ನೋಡಿ ಎಂದು ಹೇಳಿದ್ದಾರೆ, ಕೇವಲ ಮಂಡ್ಯದಲ್ಲಿ ಮಾತ್ರ ರೈತರಿಲ್ಲ, ರಾಜ್ಯದ ಇತರ ಭಾಗದಲ್ಲೂ ರೈತರಿದ್ದಾರೆ, ಅಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದೆ, ಮನೆ ಬಾಡಿಗೆ ಕಟ್ಟುವ ಹಣವನ್ನು ತೆಗೆದುಕೊಂಡು ಹೋಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ನಾವು ಬರಿ ಬಾಯಲ್ಲಿ ಮಾತನಾಡುವವರಲ್ಲ, ನಾನು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಅಲ್ಲಿನ ಜನರಿಗೆ ಸಹಾಯ ಮಾಡಿದ್ದೇನೆ ಹೊರತು ಜನರ ತೆರಿಗೆ ಹಣದಿಂದ ನಾನು ಸಹಾಯ ಮಾಡಿಲ್ಲ ಎಂದು ನಿಖಿಲ್ ಕುಮಾರಸ್ವಾಮಿಗೆ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

Comments are closed.