ಮನೋರಂಜನೆ

‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂಬ ಹೆಸರಿನಲ್ಲಿ ಸಿನಿಮಾ ಮಾಡಲು ಮುಂದಾದ ಹಲವು ನಿರ್ಮಾಪಕರು ! ಆದರೆ……

Pinterest LinkedIn Tumblr

ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣೆ ರಣಕಣ ಸ್ಯಾಂಡಲ್ ವುಡ್ ನಲ್ಲಿ ಭಾರೀ ಹವಾ ಸೃಷ್ಟಿಸುತ್ತಿದೆ. ಮಂಡ್ಯ ರಣಕಣದಲ್ಲಿ ಸೃಷ್ಟಿಯಾದ ಹಲವು ಹೆಸರುಗಳು ಹೊಸ ಟ್ರೆಂಡ್ ಸೃಷ್ಟಿಸುತ್ತಿದೆ.

ನಿಖಿಲ್ ಎಲ್ಲಿದ್ದೀಯಪ್ಪಾ ಎಂಬ ಟೈಟಲ್ ಗೆ ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ನಿಖಿಲ್ ಎಲ್ಲಿದ್ದೀಯಪ್ಪಾ ಎಂಬ ಹೆಸರಿನಲ್ಲಿ ಸಿನಿಮಾ ಮಾಡಲು ಹಲವು ಚಿತ್ರತಂಡಗಳು ಮುಂದಾಗಿವೆ.

ಹಲವು ನಿರ್ಮಾಪಕರು ನಿಖಿಲ್ ಎಲ್ಲಿದ್ದೀಯಪ್ಪಾ ಟೈಟಲ್ ನೀಡುವಂತೆ ಬೇಡಿಕೆ ಇಟ್ಟಿವೆ,ಜೊತೆಗೆ ಕಳ್ಳೆತ್ತು, ಜೋಡೆತ್ತು ಎಂಬ ಟೈಟಲ್ ಗೂ ಡಿಮ್ಯಾಂಡ್ ಹೆಚ್ಚಿದೆ. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ಈ ಟೈಟಲ್ ಗಳನ್ನು ನೀಡಲು ನಿರಾಕರಿಸಿದೆ ಎಂದು ತಿಳಿದು ಬಂದಿದೆ.

Comments are closed.