ಮನೋರಂಜನೆ

ವರಮಹಾಲಕ್ಷ್ಮಿ ಹಬ್ಬದಂದು ಪರಸ್ಪರ ಎದುರಾಗಲಿರುವ ಶಿವರಾಜ್ ಕುಮಾರ್ – ಕಿಚ್ಚ ಸುದೀಪ್ ! ಏನಂದು ಕೊಂಡ್ರಾ …?

Pinterest LinkedIn Tumblr

ಇತ್ತೀಚಿಗೆ ಪ್ರೇಮ್ ನಿರ್ದೇಶನದ ವಿಲಾನ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಇದೀಗ ಬಾಕ್ಸ್ ಆಫೀಸ್ ನಲ್ಲಿ ಪರಸ್ಪರ ಎದುರಾಗುತ್ತಿದ್ದಾರೆ.

ಇದಕ್ಕೆ ಕಾರಣವೇನೆಂದರೆ ಪಿ. ವಾಸು ನಿರ್ದೇಶನದ ಸೆಂಚುರಿ ಸ್ಟಾರ್ ಅಭಿಯನದ ಆನಂದ್ ಮತ್ತು ಕೃಷ್ಣ ನಿರ್ದೇಶನದ ಸುದೀಪ್ ಅಭಿಯನದ ಪೈಲ್ವಾನ್ ಎರಡು ಚಿತ್ರಗಳು ಆಗಸ್ಟ್ 9 ರಂದು ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ತೆರೆ ಮೇಲೆ ಬರುತ್ತಿವೆ.

ಡಿಸೆಂಬರ್ ನಲ್ಲಿ ಮುಹೂರ್ತ ಆಗಿರುವ ಆನಂದ್ ಚಿತ್ರವನ್ನು ಆಗಸ್ಟ್ 9 ರಂದು ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕ ಯೋಗಿ ದ್ವಾರಕೀಶ್ ನಿರ್ಧರಿಸಿದ್ದರು. ಆದರೆ, ಇದೀಗ ಕೃಷ್ಣ ಕೂಡಾ ಅದೇ ದಿನದಂದು ಪೈಲ್ವಾನ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಯುಗಾದಿ ದಿನದಂದು ಪೈಲ್ವಾನ ಬಿಡುಗಡೆಯ ದಿನವನ್ನು ನಿರ್ದೇಶಕರು ಟ್ವಿಟರ್ ಮೂಲಕ ಘೋಷಿಸಿದ್ದಾರೆ.

ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಕುಸ್ತಿಪಟು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕಾರ್ಯ ನಡೆಯುತ್ತಿದೆ. ಆಕಾಂಕ್ಷ ಸಿಂಗ್ ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ, ಸುಶಾಂತ್ ಸಿಂಗ್ ಮತ್ತಿತರ ತಾರಾಬಳಗವಿದೆ. ಹಿಂದಿ, ಭೋಜ್ ಪುರಿ, ಮರಾಠಿ ಸೇರಿದಂತೆ ಹಲವು ಚಿತ್ರದಲ್ಲಿ ಈ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಶಿವಣ್ಣ ಅಭಿನಯದ ಆನಂದ್ ದ್ವಾರಕೀಶ್ ಪಿಕ್ಚರ್ಸ್ ನಿರ್ಮಾಣದ 52ನೇ ಚಿತ್ರವಾಗಿದೆ. ಶಿವಲಿಂಗ ನಂತರ ಪಿ. ವಾಸು ಜೊತೆಗೆ ಎರಡನೇ ಬಾರಿಗೆ ಶಿವಣ್ಣ ಜೊತೆಯಾಗಿದ್ದಾರೆ. ರಚಿತರಾಮ್ ನಾಯಕಿಯಾಗಿದ್ದು, ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಶಿವಣ್ಣ ಹಾಗೂ ಸುದೀಪ್ ಅಭಿಯನದ ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗುತ್ತಿರುವುದರಿಂದ ಬಾಕ್ಸ್ ಆಫೀಸ್ ನಲ್ಲಿ ಕ್ಲಾಸ್ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಉಭಯ ನಾಯಕರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

Comments are closed.