ಮನೋರಂಜನೆ

ಚಿತ್ರದುರ್ಗದ ಉರಿ ಬಿಸಿಲಿಗೆ ಬೆದರಿದ ನಟ ಉಪೇಂದ್ರ: 1 ನಿಮಿಷದಲ್ಲೇ ರೋಡ್​ ಶೋ ಮುಗಿಸಿ ಕಾರಿನಲ್ಲಿ ತೆರಳಿದ ನಟ

Pinterest LinkedIn Tumblr

ಚಿತ್ರದುರ್ಗ: ಕೋಟೆ ನಗರಿ ಚಿತ್ರದುರ್ಗದ ಉರಿ ಬಿಸಿಲಿಗೆ ಬೆದರಿದ ನಟ ಉಪೇಂದ್ರ ಅವರು ಒಂದು ನಿಮಿಷದಲ್ಲೇ ರೋಡ್​ ಶೋ ಮುಗಿಸಿ ತೆರಳಿದ್ದಾರೆ.

ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸಬೇಕಿತ್ತು. ಪಟ್ಟಣದ ಶ್ರೀ ವೀರಭದ್ರಸ್ವಾಮಿ ದೇವಾಲಯದಿಂದ ರೋಡ್ ಶೋ ಬೆಳಗ್ಗೆ 9 ಗಂಟೆಗೆ ಅರಂಭವಾಗಬೇಕಿತ್ತು. ಆದರೆ ಅವರು ಅರ್ಧ ಗಂಟೆ ತಡವಾಗಿ ಆಗಮಿಸಿದ್ದರು. ಬಳಿಕ ದೇವಾಲಯಕ್ಕೆ ಭೇಟಿ ನೀಡಿದ ಅವರು ರೋಡ್​ ಶೋ ಆರಂಭಿಸಿದ್ದರು.

ಉರಿ ಬಿಸಿಲನ ತಾಪ ತಾಳಲಾರದೇ ಕೇವಲ ಒಂದು ನಿಮಿಷದಲ್ಲಿ ಭಾಷಣ ಮುಗಿಸಿದ ಉಪೇಂದ್ರ ರೋಡ್ ಶೋ ಮೊಟಕುಗೊಳಿಸಿ ಕಾರು ಹತ್ತಿ ಸ್ಥಳದಿಂದ ತೆರಳಿದ್ದಾರೆ.

Comments are closed.