ಮನೋರಂಜನೆ

ಶಾರೂಖ್‍ರನ್ನ ಅಂಕಲ್ ಅಂದಿದ್ದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾರಾ ವಿರುದ್ಧ ಕಿಡಿ!

Pinterest LinkedIn Tumblr


ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಅವರನ್ನು ನಟಿ ಸಾರಾ ಅಲಿ ಖಾನ್ ವೇದಿಕೆ ಮೇಲೆ ‘ಅಂಕಲ್’ ಎಂದು ಕರೆದಿರುವುದಕ್ಕೆ ಎಸ್‍ಆರ್‍ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ನಟ ಸೈಫ್ ಅಲಿ ಖಾನ್ ಹಾಗೂ ಶಾರೂಖ್ ಖಾನ್ ನಿರೂಪಕರಾಗಿ ಭಾಗಿಯಾಗಿದ್ದರು. ಈ ವೇಳೆ ನನ್ನ ತಂದೆ ಹಾಗೂ ಶಾರೂಖ್ ಅಂಕಲ್ ಜೊತೆಗೂಡಿ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ ಸಾರಾ ಶಾರೂಖ್‍ರನ್ನು ಅಂಕಲ್ ಎಂದು ಕರೆದಿರುವ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾರಾ ಈ ರೀತಿ ಶಾರೂಖ್‍ರನ್ನ ಕರೆದಿರುವುದಕ್ಕೆ ಎಸ್‍ಆರ್‍ಕೆ ಅಭಿಮಾನಿಗಳು ನಟಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಇನ್‍ಸ್ಟಾಗ್ರಾಮ್, ಟ್ವಿಟ್ಟರ್ ಹೀಗೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಾರಾ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರಾ ಈ ರೀತಿ ಸ್ಟಾರ್ ನಟನಿಗೆ ಅಂಕಲ್ ಅಂದಿರುವುದು ಸರಿಯಲ್ಲ. ವೃತ್ತಿ ವಿಷಯಕ್ಕೆ ಬಂದಾಗ ತಮಗಿಂತ ಹಿರಿಯ ನಟರಿಗೆ ಗೌರವದಿಂದ ಸರ್, ಮೇಡಂ ಎಂದು ಕರೆಯಬೇಕು. ಆದ್ರೆ ಎಲ್ಲರ ಮುಂದೆ ಶಾರೂಖ್‍ಗೆ ಸಾರಾ ಅಂಕಲ್ ಅಂದಿದ್ದು ತಪ್ಪು ಎಂದು ಕಿಡಿಕಾರಿದ್ದಾರೆ. ಇದಕ್ಕೆ ಸಾರಾ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ಟೀಕಿಸುತ್ತಿರುವುದಕ್ಕೆ ರೊಚ್ಚಿಗೆದ್ದು ಶಾರೂಖ್ ಅಭಿಮಾನಿಗಳಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ. ಶಾರೂಖ್ ಖಾನ್ ಮಕ್ಕಳು ಸೈಫ್ ಆಲಿ ಖಾನ್‍ರನ್ನು ಅಂಕಲ್ ಎಂದೇ ಕರೆಯುತ್ತಾರೆ. ಸಾರಾ ಆ ರೀತಿ ಕರೆದು ಗೌರವಿಸಿದ್ದಾರೆ ಅಷ್ಟೇ ಎಂದು ಸಾರಾ ಪರ ನಿಂತಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾರಾ ಹಾಗೂ ಶಾರೂಖ್ ಅಭಿಮಾನಿಗಳ ನಡುವೆ ಸ್ಟಾರ್ ವಾರ್ ಶುರುವಾಗಿದೆ. ಅಲ್ಲದೆ ಸಾರಾ ವಸರ್ಸ್ ಶಾರೂಖ್ ಟ್ರೋಲ್‍ಗಳು ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

Comments are closed.