ಮನೋರಂಜನೆ

ತನ್ನ ಬ್ರೇಕಿಂಗ್ ನ್ಯೂಸ್ ಬಯಲು ಮಾಡಿದ ನಟಿ ರಶ್ಮಿಕಾ ಮಂದಣ್ಣ

Pinterest LinkedIn Tumblr


ಹೈದರಾಬಾದ್: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಶುಕ್ರವಾರ ತಮ್ಮ ಟ್ವಿಟ್ಟರಿನಲ್ಲಿ ಸಿಂಗಲ್ ಫಾರೆವರ್ ಎಂದು ಸುಳಿವು ನೀಡುವ ಮೂಲಕ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಹೇಳಿದ್ದರು. ಇದೀಗ ಅವರು ತಮ್ಮ ಬ್ರೇಕಿಂಗ್ ನ್ಯೂಸ್ ಏನೆಂಬುದನ್ನು ಬಯಲು ಮಾಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ಸುಮಾರು 2.50ಕ್ಕೆ ರಶ್ಮಿಕಾ ತಮ್ಮ ಟ್ವಿಟ್ಟರಿನಲ್ಲಿ, “ಇಂದು ಸಂಜೆ 6 ಗಂಟೆಗೆ ಒಂದು ಘೋಷಣೆ ಮಾಡಲಿದ್ದೇನೆ. ಯಾವ ವಿಷಯ ಎಂದು ಕುತೂಹಲದಿಂದ ಕಾಯುತ್ತಿದ್ದೀರಾ? ನಾನು ನಿಮಗೆ ಸುಳಿವು ನೀಡುತ್ತೇನೆ. ‘ಸಿಂಗಲ್ ಫಾರೆವರ್’ ಅಷ್ಟೇ ನಾನು ಹೇಳುವುದು. ಗೆಸ್ ಮಾಡುತ್ತೀರಿ” ಎಂದು ಟ್ವೀಟ್ ಮಾಡಿದ್ದರು.

ಸುಮಾರು 6 ಗಂಟೆಗೆ ರಶ್ಮಿಕಾ, ಮಹಿಳೆ ಮತ್ತು ಮಹನಿಯರೇ, ಬಾಲಕ ಹಾಗೂ ಬಾಲಕಿಯರೇ ಹಾಗೂ ಎಲ್ಲ ವಯಸ್ಸಿನ ಚಿಕ್ಕ ಮಕ್ಕಳೇ, ಸಿಂಗಲ್ ಫಾರೆವರ್ ಎಂದರೆ ‘ಭೀಷ್ಮ’ ಬಾಯ್ಸ್. ನಿತಿನ್ ಸರ್, ವೆಂಕಿ ಕುದುಮುಲಾ ಸರ್, ನಾಗ ವಂಶಿ ಸರ್, ಸಿತಾರಾ ಎಂಟರ್ ಟೈನ್‍ಮೆಂಟ್. ಚಿತ್ರದ ಶೂಟಿಂಗ್ ಶುರುವಾಗೋದಕ್ಕೆ ಕಾಯುತ್ತಿದ್ದೇನೆ. ಇದೇ ಬ್ರೇಕಿಂಗ್ ನ್ಯೂಸ್ ಎಂದು ತಮ್ಮ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಾಡಿದ ಟ್ವೀಟ್‍ಗೆ ಹಾಗೂ ಅವರು ನೀಡಿದ ಸುಳಿವಿನ ಬಗ್ಗೆ ಅಭಿಮಾನಿಗಳು ಯೋಚಿಸುತ್ತಿದ್ದರು. ಅಲ್ಲದೆ ಅವರ ಟ್ವೀಟ್‍ಗಾಗಿ ಸಂಜೆ 6 ಗಂಟೆಗೆ ಕಾಯುತ್ತಿದ್ದರು. ಆದ್ರೆ ರಶ್ಮಿಕಾ ಸಂಜೆ 6 ಗಂಟೆಗೆ ತಮ್ಮ ಭೀಷ್ಮ ಸಿನಿಮಾದ ಬಗ್ಗೆ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು.

Comments are closed.