ಮನೋರಂಜನೆ

ತೆಲುಗು ನಟ ವೆಂಕಟೇಶ್ ಪುತ್ರಿಯ ಮದುವೆಯಲ್ಲಿ ಸಲ್ಮಾನ್ ಖಾನ್ ಡ್ಯಾನ್ಸ್

Pinterest LinkedIn Tumblr


ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ವೆಂಕಟೇಶ್ ದಗ್ಗುಬಾಟಿ ಅವರ ಹಿರಿಯ ಮಗಳ ಮದುವೆಯಲ್ಲಿ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ವೆಂಕಟೇಶ್ ಹಿರಿಯ ಮಗಳು ಆಶ್ರಿತಾ ಅವರು ವಿನಾಯಕ್ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಕಾರ್ಯಕ್ರಮಕ್ಕೆ ಕೇವಲ ಆಪ್ತ ಸ್ನೇಹಿತರು ಹಾಗೂ ಸಂಬಂಧಿಕರು ಭಾಗವಹಿಸಿದ್ದರು. ವೆಂಕಟೇಶ್ ಮಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಒಂದು ವಿಡಿಯೋದಲ್ಲಿ ವೆಂಕಟೇಶ್ ಹಾಗೂ ಸಲ್ಮಾನ್ ಖಾನ್ ಹಿಂದಿಯ ‘ಕಿಕ್’ ಚಿತ್ರದ ‘ಜುಮ್ಮೆ ಕೀ ರಾತ್ ಹೈ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 15 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ವೆಂಕಟೇಶ್ ಹಾಗೂ ಸಲ್ಮಾನ್ ಇಬ್ಬರು ವೇದಿಕೆಯ ಮೇಲೆ ಕುಣಿದು ಕುಪ್ಪಳಿಸಿದ್ದಾರೆ.

ಸಲ್ಮಾನ್ ಖಾನ್ ಹೊರತು ಪಡಿಸಿ ವೆಂಕಟೇಶ್ ಮಗಳ ಮದುವೆಗೆ ನಟಿ ನಮಂತಾ ಹಾಗೂ ಅವರ ಪತಿ, ನಟ ನಾಗಚೈತನ್ಯ, ವೆಂಕಟೇಶ್ ಅವರ ಸಹೋದರಳಿಯ ರಾಣಾ ದಗ್ಗುಬಾಟಿ ಹಾಗೂ ನಟಿ, ರಾಜಾಕಾರಣಿ ಬೀನಾ ಕಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Comments are closed.