ಮನೋರಂಜನೆ

ನಟ ಕಿಚ್ಚ ಸುದೀಪ್ ವಿರುದ್ಧ ಅರೆಸ್ಟ್ ವಾರಂಟ್ ! ಸುದೀಪ್ ಮಾಡಿದ ತಪ್ಪೇನು…?

Pinterest LinkedIn Tumblr

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರಿಗೆ ‘ಅರೆಸ್ಟ್ ವಾರೆಂಟ್’ ನೀಡಲಾಗಿದೆ. ದೀಪಕ್ ಮಯೂರ್ ಎಂಬುವರು ಸುದೀಪ್ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜೆಎಂಎಫ್ ಸಿ ನ್ಯಾಯಾಲಯದಿಂದ ಸುದೀಪ್ ಅವರಿಗೆ ವಾರೆಂಟ್ ನೀಡಲಾಗಿಗೆ.

ವಾರಸ್ಥಾರ ಧಾರಾವಾಹಿಗಾಗಿ ಮನೆ ಹಾಗೂ ತೋಟ ಬಾಡಿಗೆ ನೀಡಿದ್ದ ದೀಪಕ್ ಅವರು ಸುದೀಪ್ ನೇತ್ರೂತ್ವದ ಧಾರಾವಾಹಿ ತಂಡದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದರು. ಅಷ್ಟೇ ಅಲ್ಲ, ಕೇಸ್ ದಾಖಲಿಸಿ ಆ ಮೂಲಕ ತಮಗೆ ಅನ್ಯಾವಾಗಿದೆ ಎಂದು ಹೇಳಿ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ನಟ ಸುದೀಪ್ ನಿರ್ಮಾಣದ ಧಾರಾವಾಹಿಯಾಗಿದ್ದ ‘ವಾರಸ್ಧಾರ’ ಚಿತ್ರಕರಣಕ್ಕೆ ಚಿಕ್ಕಮಗಳೂರಿನಲ್ಲಿರುವ ದೀಪಕ್ ಮಯೂರ್ ಎಂಬವರ ಮನೆ, ತೋಟಗಳನ್ನು ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ. ನಿಗದಿ ಪಡಿಸಿದ್ದಂತೆ ಬಾಡಿಗೆ ಹಣ ನೀಡದೆ ಸಮ್ಮನ್ನು ಸತಾಯಿಸುತ್ತಿದ್ದಾರೆ ಎಂದು ದೀಪಕ್ ಅವರು ದೂರಿನಲ್ಲಿ ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರೀಕರಣದ ವೇಳೆ ತಮ್ಮ ತೋಟವನ್ನು ನಾಶ ಮಾಡಿದ್ದಾರೆಂದು ಕೂಡ ಅವರು ತಮ್ಮ ದೂರಿನಲ್ಲಿ ಬರೆದಿದ್ದಾರೆ.

ಈ ಸಂಬಂಧ, ನಟ ಸುದೀಪ್ ಅವರು ನಿನ್ನೆ ಕೋರ್ಟಿಗೆ ಹಾಜರಾಗಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಸುದೀಪ್ ಕೋರ್ಟಿಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ನಟ ಕಿಚ್ಚಅವರಿಗೆ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ನೀಡಲಾಗಿದೆ. ಈ ಬಗ್ಗೆ, ಮುಂದಿನ ಮಾಹಿತಿ ಸದ್ಯಕ್ಕೆ ದೊರಕಿಲ್ಲ. ಒಟ್ಟಿನಲ್ಲಿ, ಹಲವು ತಿಂಗಳುಗಳಿಂದ ಈ ಸಂಬಂಧ ಸುದೀಪ್ ಒಡೆತನದ ಪ್ರೊಡಕ್ಷನ್ ಹೌಸ್ ಮತ್ತು ದೀಪಕ್ ಮಯೂರ್ ಮಧ್ಯೆ ಜಟಾಪಟಿ ಮುಂದುವರಿಯುತ್ತಿದೆ.

ಅಂದಹಾಗೆ, ನಟ ಸುದೀಪ್ ಅವರು ಇತ್ತೀಚಿಗಷ್ಟೆ ತಮ್ಮ ‘ಪೈಲ್ವಾನ್’ ಹಾಗೂ ತೆಲುಗಿನ, ಮೆಗಾಸ್ಟಾರ್ ನಾಯಕತ್ವದ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ತಮಗೆ ನೀಡಲಾಗಿದ್ದ ವಿಶೇಷ ಪಾತ್ರದ ಶೂಟಿಂಗ್ ಮುಗಿಸಿದ್ದಾರೆ. ಸದ್ಯಕ್ಕೆ ತಮ್ಮ ಮುಂಬರುವ ಚಿತ್ರವಾದ ‘ಕೋಟಿಗೊಬ್ಬ 3’ ಚಿತ್ರೀಕರಣದಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಮುಂದೆ, ‘ಬಿಲ್ಲ ಬಾ‍ಷ ರಂಗ’ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ. ಒಟ್ಟಿನಲ್ಲಿ, ಒಂದಾದ ಮೇಲೆ ಇನ್ನೊಂದರಂತೆ ಸಿನಿಮಾಗಳನ್ನು ಒಪ್ಪಿಕೊಂಡು ಸುದೀಪ್ ವರ್ಷವಿಡೀ ಬ್ಯುಸಿಯಾಗಿರುವ ನಟನರ ಸಾಲಿಗೆ ಸೇರಿದ್ದಾರೆ.

Comments are closed.