ಮನೋರಂಜನೆ

ಅಪರೂಪದ ಅಭಿಮಾನಿಯನ್ನು ಅಪ್ಪಿಮುದ್ದಾಡಿದ ಬಾಲಿವುಡ್ ಕಿಂಗ್ ಖಾನ್ ಶಾರೂಖ್‍!

Pinterest LinkedIn Tumblr


ಕೋಲ್ಕತ್ತಾ: ಬಾಲಿವುಡ್ ಕಿಂಗ್ ಖಾನ್ ಶಾರೂಖ್‍ಗೆ ಅಭಿಮಾನಿಗಳು ಸಾಕಷ್ಟು ಮಂದಿ ಇದ್ದಾರೆ. ಸಣ್ಣಮಕ್ಕಳಿಂದ ಹಿಡಿದು ವೃದ್ಧರವರೆಗೂ ಇವರಿಗೆ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ ನಟರನ್ನು ಅಭಿಮಾನಿಗಳು ಯಾವತ್ತೂ ತಮ್ಮ ಹೃದಯದಲ್ಲಿಟ್ಟಿರುತ್ತಾರೆ. ಇದಕ್ಕೆ ಶಾರೂಖ್ ಅವರು ಇತ್ತೀಚೆಗೆ ತಮ್ಮ ವಿಶೇಷ ಅಭಿಮಾನಿಯ ಭೇಟಿಯಾದ ಕ್ಷಣ ಪೂರಕವಾಗಿದೆ.

ಹೌದು ಶಾರೂಖ್, ಈಡನ್ ಗಾರ್ಡನ್ ನಲ್ಲಿ ವಿಕಲಚೇತನ ಅಭಿಮಾನಿ ಹರ್ಷಲ್ ಗೋಯೆಂಕಾರನ್ನು ಅಪ್ಪಿಕೊಂಡು ಮುದ್ದಾಡುವ ಮೂಲಕ ನೆರೆದವರ ಗಮನ ಸೆಳೆದಿದ್ದಾರೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾನುವಾರ ಹೈದರಾಬಾದ್ ತಂಡದೊಂದಿಗೆ ಶಾರೂಖ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯಾಚ್ ನಡೆಯುತ್ತಿತ್ತು. ಈ ಮ್ಯಾಚ್ ನೋಡಲು ವಿಶೇಷ ಅಭಿಮಾನಿ ಬಂದಿದ್ದರು. ಅಲ್ಲದೆ ಸ್ಟೇಡಿಯಂ ನಲ್ಲಿ ಶಾರೂಖ್ ನೋಡಲು ವಿಶೇಷ ಅಭಿಮಾನಿ ಕಾದುಕುಳಿತಿದ್ದರು. ಹೀಗಾಗಿ ಆ ಅಭಿಮಾನಿಯ ಆಸೆ ಈಡೇರಿಸಲು ಶಾರೂಖ್ ಭೇಟಿ ಮಾಡಿದ್ದಾರೆ. ಅಲ್ಲದೆ ಅವರನ್ನು ಅಪ್ಪಿಕೊಂಡಿದ್ದಾರೆ. ಅಭಿಮಾನಿಯೂ ಕೂಡ ತನ್ನ ನೆಚ್ಚಿನ ನಟನನ್ನು ಕಂಡು ಖುಷಿಯಲ್ಲಿ ತೇಲಾಡಿದ್ದಾರೆ. ಮಾತ್ರವಲ್ಲದೆ `ಐ ಲವ್ ಯೂ, ಐ ಲವ್ ಯೂ’ ಎಂದು ಮತ್ತೆ ಮತ್ತೆ ಹೇಳಿದ್ದಾರೆ.

ಶಾರೂಖ್ ತನ್ನ ಅಭಿಮಾನಿಯನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಿದ್ದಂತೆಯೇ ಅಭಿಮಾನಿ ಒಂದು ಬಾರಿ ಏನೂ ಮಾಡಲು ತೋಚದೇ ತಟಸ್ಥರಾದ್ರು. ಶಾರೂಖ್ ಕೆಲಹೊತ್ತು ಅಭಿಮಾನಿ ಜೊತೆ ಮಾತುಕತೆ ನಡೆಸಿದ್ದಾರೆ. ನಂತರ ತನ್ನ ತಂಡಕ್ಕೆ ಸಪೋರ್ಟ್ ಮಾಡುವಂತೆ ಕೇಳಿಕೊಂಡಿದ್ದಾರೆ.

ಶಾರೂಖ್ ಈ ಹಿಂದೆಯೂ ಇಂತಹ ಹಲವು ಅಭಿಮಾನಿಗಳನ್ನು ಭೇಟಿಯಾಗುವ ಮೂಲಕ ಅವರ ಆಸೆ ಈಡೇರಿಸಿದ್ದರು. ಒಟ್ಟಿನಲ್ಲಿ ಇತ್ತೀಚೆಗೆ ವಿಶೇಷ ಅಭಿಮಾನಿಯನ್ನು ಭೇಟಿ ಮಾಡುವ ಮೂಲಕ ಶಾರೂಖ್ ಇತರ ಅಭಿಮಾನಿಗಳ ಮನ ಗೆದ್ದಿದ್ದಾರೆ.

Comments are closed.