ಮನೋರಂಜನೆ

ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ಮಾತನಾಡಿದ ಬಾಲಿವುಡ್ ಖ್ಯಾತ ನಟ, ಯಶ್ ಚೋಪ್ರಾ ಪುತ್ರ !

Pinterest LinkedIn Tumblr

ಮುಂಬೈ: ಬಾಲಿವುಡ್ ನ ಸೂಪರ್ ಹಿಟ್ ಚಿತ್ರಗಳಾದ ಮೊಹಬ್ಬತ್, ಧೂಮ್ 3 ಚಿತ್ರಗಳಲ್ಲಿ ಅಭಿನಯಿಸಿದ್ದ ಖ್ಯಾತ ನಿರ್ಮಾಪಕ ಯಶ್ ಚೋಪ್ರಾ ಮಗ ಉದಯ್ ಚೋಪ್ರಾ ಅವರು ಆತ್ಮಹತ್ಯೆಯ ಮಾತಾಡಿದ್ದಾರೆ.

ಉದಯ್ ಚೋಪ್ರಾ ತಾವು ಡಿಪ್ರೆಷನ್ ನಲ್ಲಿ ಇದ್ದೇನೆಂದು, ಎಷ್ಟೇ ಪ್ರಯತ್ನಿಸಿದರೂ ಇದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಸಾವಿಗೆ ತುಂಬಾ ಹತ್ತಿರ ಹೋದಂತೆ ಅನ್ನಿಸುತ್ತದೆ. ಆತ್ಮಹತ್ಯೆಗೆ ಇದು ಸೂಕ್ತ ದಾರಿಯಾಗಿ ಭಾವಿಸುತ್ತಿರುವುದಾಗಿ ಉದಯ್ ಮಾಡಿರುವ ಟ್ವೀಟ್ ಗಳನ್ನು ಅವರ ಕುಟುಂಬಿಕರು ಡಿಲೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ಜೂನ್ 2018ರಲ್ಲಿ ಸಹ ಉದಯ್ ಇಂತಹ ಟ್ವೀಟ್ ಮಾಡಿದ್ದರು.

ಖಿನ್ನತೆಗೆ ವ್ಯಕ್ತಿಗಳ ಭಿನ್ನವರ್ತನೆ, ಆಹಾರಾಭ್ಯಾಸ, ಡ್ರಗ್ಸ್ ನಂತಹವು ಕಾರಣವಾಗುತ್ತವೆ. ಅಂತಹವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕೆಂದು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದರು.

Comments are closed.