ಮನೋರಂಜನೆ

ಮೋದಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಅಂತಾ ಚಿತ್ರದಲ್ಲಿ ತೋರಿಸಬೇಕಿತ್ತು: ಮೋದಿ ಚಿತ್ರದ ಟ್ರೈಲರ್ ಕುರಿತು ವ್ಯಂಗವಾಡಿದ ನಟ ಸಿದ್ಧಾರ್ಥ!

Pinterest LinkedIn Tumblr

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಪಿಎಂ ನರೇಂದ್ರ ಮೋದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಈ ಕುರಿತಂತೆ ಪ್ರತಿಕ್ರಿಯಿಸಿರುವ ನಟ ಸಿದ್ದಾರ್ಥ್ ಎಲ್ಲವನ್ನು ತಾನೇ ಮಾಡಿದ್ದಾಗಿ ಹೇಳಿಕೊಳ್ಳುವ ಮೋದಿ ಅವರೇ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಅಂತಾ ಚಿತ್ರದಲ್ಲಿ ತೋರಿಸಬೇಕಿತ್ತು ಎಂದು ಕುಟುಕಿದ್ದಾರೆ.

ರಂಗ್ ದೇ ಬಸಂತಿ ದೇಶಭಕ್ತಿ ಚಿತ್ರದಲ್ಲಿ ನಟಿಸಿದ್ದ ಸಿದ್ಧಾರ್ಥ್ ಇದೀಗ ಪ್ರಧಾನಿ ನರೇಂದ್ರ ಮೋದಿ ಟ್ರೈಲರ್ ಕುರಿತಂತೆ ಟೀಕಿಸಿ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಕೈಯಲ್ಲಿ ಬ್ರಿಟಿಷರನ್ನು ಓಡಿಸಿ ಹೇಗೆ ಸ್ವತಂತ್ರ್ಯವನ್ನು ತಂದುಕೊಟ್ಟರು ಎಂಬುದನ್ನು ತೋರಿಸಲು ಮರೆತಿದ್ದಾರೆ ಅನಿಸುತ್ತದೆ. ಅದನ್ನು ತೋರಿಸಿದ್ದರೆ ಆ ಮೂಲಕ ಜಾತ್ಯಾತೀತತೆ, ಕಮ್ಯೂನಿಸ್ಟ್, ನಕ್ಸಲರ ಮತ್ತು ಜವಾಹರ್ ಲಾಲ್ ನೆಹರೂ ಅವರ ಕಾಲೆಳೆಯಬಹುದು ಎಂದು ಟ್ವೀಟಿಸಿದ್ದಾರೆ.

Comments are closed.