ಮನೋರಂಜನೆ

ನಟಿ ರಮ್ಯಾಗೆ ‘ರಿಟೈರ್ಡ್ ಬ್ಯೂಟಿ’ ಎಂದು ಕಾಲೆಳೆದ ಜಗ್ಗೇಶ್ ! ಮುಂದೆ ಹೇಳಿದ್ದೇನು…?

Pinterest LinkedIn Tumblr

ಪ್ರಧಾನಿ ನರೇಂದ್ರ ಮೋದಿ ಅವರ ಹಿಂಬಾಲಕರು ಮೂರ್ಖರು ಎಂದು ಹೇಳಿ ವಿವಾದ ಸೃಷ್ಠಿಸಿದ್ದ ಮಾಜಿ ಸಂಸದೆ ರಮ್ಯಾಗೆ ನವರಸ ನಾಯಕ ಜಗ್ಗೇಶ್ ಮತದಾನ ಮಾಡದವರು ಮತದಾನದ ಜಾಗೃತಿ ಮೂಡಿಸುತ್ತಿದ್ದಾರೆ ಎಂತ ವಿಪರ್ಯಾಸ ಎಂದು ತಿರುಗೇಟು ನೀಡಿದ್ದಾರೆ.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುವ ರಮ್ಯಾ ಅವರು ಹೊಸದಾಗಿ ಮತದಾನ ಮಾಡುವವರು ನಿಮ್ಮ ಹೆಸರು ನೊಂದಾಯಿಸಿ ಎಂದು ತಮ್ಮ ಟ್ವೀಟರ್ ನಲ್ಲಿ ಜಾಗೃತಿ ಮೂಡಿಸಿದ್ದರು. ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.

ಇದಕ್ಕೆ ಜಗ್ಗೇಶ್ ಅವರು ಕಳೆದ ವಿಧಾನಸಭೆ ಹಾಗೂ ಲೋಕಸಭೆಯ ಉಪಚುನಾವಣೆಯಲ್ಲಿ ಮತದಾನ ಮಾಡದ ನೀವು, ಈಗ ಯಾವ ಮುಖವಿಟ್ಟುಕೊಂಡು ಮತದಾನದ ಜಾಗೃತಿ ಮೂಡಿಸುತ್ತಿದ್ದೀರಾ ಎಂದು ಪದ್ಮಾವತಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಜಗ್ಗೇಶ್ ಕೂಡ ಸಾಮಾಜಿಕ ಜಾಲತಾಣ ಟ್ರೋಲಿಗರಿಗರ ಪರ ನಿಂತು ರಮ್ಯಾ ಅವರಿಗೆ ಮಾತಿನ ಚಾಟಿ ಬೀಸಿದ್ದಾರೆ. ಆಕೆ ಮಾನಸಿಕ ಅಸ್ವಸ್ಥ. ಯಾರಿಗೆ ವಂಶವಾಹಿನಿ ಅರಿವಿರುತ್ತದೋ ಅವರು ಜವಾಬ್ದಾರಿ ಮನುಷ್ಯರು, ಮನುಷ್ಯರಿಗೆ ಬುದ್ಧಿ ಹೇಳಬಹುದೆ ಹೊರತು ಮೃಗಕ್ಕಲ್ಲ ಎಂದು ಟ್ವೀಟ್ ನಲ್ಲಿ ತಿವಿದಿದ್ದಾರೆ ಜಗ್ಗೇಶ್.

Comments are closed.