ಮನೋರಂಜನೆ

ಅಂಬಿ ಅಂತ್ಯಕ್ರಿಯೆ ಕುರಿತ ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ತಿರುಗೇಟು

Pinterest LinkedIn Tumblr


ಮಂಡ್ಯ: ಹಿರಿಯ ನಟ, ರಾಜಕಾರಣಿ, ನನ್ನ ಪತಿ ಅಂಬರೀಷ್‌ ಅವರ ಅಂತ್ಯಕ್ರಿಯೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ತಪ್ಪು ಎಂದು ಸುಮಲತಾ ಅಂಬರೀಷ್‌ ತಿಳಿಸಿದ್ದಾರೆ.

ಅಂಬರೀಷ್‌ ಅಂತ್ಯಕ್ರಿಯೆ ಕುರಿತು ಹೇಳಿಕೆ ನೀಡಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ಸುಮಲತಾ ಅಂಬರೀಷ್‌ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸುಮಲತಾ, ಅಂಬರೀಷ್‌ ಅವರ ಅಂತ್ಯಕ್ರಿಯೆ ಬಗ್ಗೆ ಮಾತನಾಡುವುದು ತಪ್ಪು. ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಇನ್ನೂ ದೊಡ್ಡ ತಪ್ಪು. ಈ ಬಗ್ಗೆ ನಾನು ಹೆಚ್ಚು ಏನು ಹೇಳುವುದಿಲ್ಲ ಎಂದರು.

ಮಂಡ್ಯದಲ್ಲಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ್ದ ಸಿಎಂ ಕುಮಾರಸ್ವಾಮಿ, ಅಂಬರೀಷ್‌ ನಿಧನ ಸುದ್ದಿಯನ್ನು ಮೊದಲು ನನಗೆ ತಿಳಿಸಿದ್ದೇ ನಿಖಿಲ್‌, ನನಗೆ ನಿಖಿಲ್‌ ಬೇರೆ ಅಲ್ಲ, ಅಭಿ ಬೇರೆ ಅಲ್ಲ. ಮಂಡ್ಯಕ್ಕೆ ಅಂಬರೀಷ್‌ ಪಾರ್ಥಿವ ಶರೀರವನ್ನು ಕರೆ ತರಲು ರಕ್ಷಣಾ ಸಚಿವರಿಗೆ ಕರೆ ಮಾಡಿ ಸೇನಾ ವಿಮಾನ ತರಿಸಿದ್ದೆ ಎಂದು ಹೇಳಿದ್ದರು.

Comments are closed.