ಮನೋರಂಜನೆ

ತಮಿಳು ನಟ ಆರ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಯೇಶಾ ಸೈಗಲ್

Pinterest LinkedIn Tumblr

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ನಟಿ ಸಯೇಶಾ ಸೈಗಲ್ ಅವರು ತಮಿಳು ನಟ ಆರ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆರ್ಯ ಹಾಗೂ ಸಯೇಶಾ ನಡುವೆ ಕೆಲ ವರ್ಷಗಳ ಹಿಂದೆ ಪ್ರೇಮಾಂಕುರವಾಗಿತ್ತು. ಈ ವಿಷಯವನ್ನು ವ್ಯಾಲೇಂಟೈನ್ ಡೇಯಂದು ಬಹಿರಂಗಪಡಿಸಿ ಶೀಘ್ರದಲ್ಲೇ ವಿವಾಹವಾಗುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ದಾಂಪತ್ಯ ಜೀವಕ್ಕೆ ಕಾಲಿಟ್ಟಿದ್ದಾರೆ.

ಇನ್ನು ಶನಿವಾರ ಹೈದರಾಬಾದ್ ನಲ್ಲಿ ನಡೆದ ಸಂಗೀತ್ ಕಾರ್ಯಕ್ರಮದ ವೇಳೆ ಚಿತ್ರರಂಗದ ಹಲವರು ಭಾಗಿಯಾಗಿ ಯುವ ಜೋಡಿಗೆ ಶುಭಾಶಯ ತಿಳಿಸಿದರು. ಅಲ್ಲು ಅರ್ಜುನ್, ಸಂಜಯ್ ದತ್, ಸೂರ್ಯ ಹಾಗೂ ಕಾರ್ತಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Comments are closed.