ಮನೋರಂಜನೆ

ಚೆಲುವಿನ ಚಿತ್ತಾರ ಚಿತ್ರದ ಪಪ್ಪುಸಿ ಖ್ಯಾತಿಯ ನಟ ರಾಕೇಶ್ ಕುಟುಂಬಕ್ಕೆ ಶ್ರುತಿನಾಯ್ಡು ₹1 ಲಕ್ಷ ನೆರವು!

Pinterest LinkedIn Tumblr


ಪ್ರೀಮಿಯರ್ ಪದ್ಮಿನಿ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ‘ಚೆಲುವಿನ ಚಿತ್ತಾರ’ ಚಿತ್ರದ ಪಪ್ಪುಸಿ ಖ್ಯಾತಿಯ ನಟ ರಾಕೇಶ್ ಕುಟುಂಬಕ್ಕೆ ‘ಪ್ರೀಮಿಯರ್ ಪದ್ಮಿನಿ’ ಚಿತ್ರತಂಡದ ವತಿಯಿಂದ 1 ಲಕ್ಷ ರು. ಸಹಾಯ ಧನ ನೀಡಲಾಯಿತು.

ನಿರ್ಮಾಪಕಿ ಶ್ರುತಿ ನಾಯ್ಡು ಅವರ ಪರವಾಗಿ ನಟ ರಾಕೇಶ್ ಅವರ ತಾಯಿ ಆಶಾರಾಣಿ ಅವರಿಗೆ ದರ್ಶನ್ ಚೆಕ್ ವಿತರಿಸಿದರು. ನಂತರ ಮಾತನಾಡಿದ ಶ್ರುತಿ ನಾಯ್ಡು, ‘ರಾಕೇಶ್ ಕುಟುಂಬ ಈಗ ಆರ್ಥಿಕ ಸಂಕಷ್ಟದಲ್ಲಿದೆ. ರಾಕೇಶ್ ತಾಯಿ ಆಶಾರಾಣಿ ಅವರು ಕೂಡ ಕಲಾವಿದರು. ನಟಿಯಾಗಿ ನನಗೂ ಪರಿಚಯ ಇದ್ದಾರೆ. ಅವರ ಸಂಕಷ್ಟಕ್ಕೆ ಸಣ್ಣ ರೀತಿಯಲ್ಲಿ ಸ್ಪಂದಿಸುವ ಉದ್ದೇಶದೊಂದಿಗೆ ಈ ಆರ್ಥಿಕ ನೆರವು ನೀಡಲಾಗಿದೆ’ ಎಂದು ಹೇಳಿದರು.

ಈ ಸಮಾಜಮುಖಿ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂಬುದಾಗಿ ಹೇಳಿದರು. ‘ನಟಿ ಬಿ.ವಿ. ರಾಧಾ ಅವರ ಹೆಸರಲ್ಲಿ ಪ್ರತಿ ವರ್ಷ ಅಸಹಾಯಕರಿಗೆ, ಆರ್ಥಿಕ ತೊಂದರೆಗೆ ಸಿಲುಕಿದ ಕಲಾವಿದರಿಗೆ ನಮ್ಮ ಸಂಸ್ಥೆಯ ಮೂಲಕ 1 ಲಕ್ಷರು. ಧನ ಸಹಾಯ ನೀಡಲು ನಿರ್ಧರಿಸಿದ್ದೇವೆ’ ಎಂದರು.

Comments are closed.