ಮನೋರಂಜನೆ

ಪುಲ್ವಾಮಾ ಉಗ್ರ ದಾಳಿ ಬಗ್ಗೆ ನಟಿ ಪ್ರಿಯಾಂಕಾ ಚೋಪ್ರಾ ಹೇಳಿಕೆಗೆ ಗರಂ ಆದ ಐಜಿಪಿ ರೂಪಾ ಹೇಳಿದ್ದೇನು..?

Pinterest LinkedIn Tumblr

ಬೆಂಗಳೂರು: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ದಾಳಿಯ ಬಗ್ಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮಾಡಿದ್ದ ಟ್ವೀಟ್ ಗೆ ಐಜಿಪಿ ಡಿ. ರೂಪಾ ಗರಂ ಆಗಿ ಟ್ವೀಟ್ ಮಾಡಿದ್ದು ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಿಯಾಂಕಾ ಚೋಪ್ರಾ ತಮ್ಮ ಟ್ವೀಟರ್ ನಲ್ಲಿ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ದಾಳಿ ನಿಜಕ್ಕೂ ಶಾಕ್ ಆಗಿದೆ. ದ್ವೇಷಿಸುವುದು ಉತ್ತರವಲ್ಲ. ಹುತಾತ್ಮ ಯೋಧರ ಕುಟುಂಬ ಹಾಗೂ ಗಾಯಾಳು ಯೋಧರಿಗೆ ಶಕ್ತಿ ನೀಡಲಿ ಎಂದು ಟ್ವೀಟಿಸಿದ್ದರು. ದ್ವೇಷಿಸುವುದು ಉತ್ತರವಲ್ಲ ಎಂಬ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಐಜಿಪಿ ಡಿ. ರೂಪಾ ಅವರು ಯೋಧರ ಮೇಲಿನ ದಾಳಿ ಕೇವಲ ಪ್ರೀತಿ-ದ್ವೇಷದ ಸಿನಿಮಾ ಕಥೆಯಂತಲ್ಲ. ಅದೊಂದು ದೇಶದ ಮೇಲಿನ ದಾಳಿ. ಒಂದು ದೇಶದ ಶಾಂತಿಯುತ ಅಸ್ತಿತ್ವದ ಮೇಲೆ ಅಕ್ರಮ ಶಕ್ತಿಗಳು ನಡೆಸುವ ದಾಳಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಸಾವಿರಾರು ಜನರು ಶೇರ್ ಮಾಡಿ, ರೂಪಾ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments are closed.