ಮನೋರಂಜನೆ

ಬಿಗ್​​ಬಾಸ್-6: ಇಬ್ಬರು ಔಟ್, ಮೂವರು ಗ್ರಾಂಡ್​​ ಫಿನಾಲೆಗೆ

Pinterest LinkedIn Tumblr


ಕನ್ನಡ ಜನಪ್ರಿಯ ಶೋ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್​​ಬಾಸ್​​ ಸೀಸನ್​​ 6 ಗ್ರಾಂಡ್​​ ಫಿನಾಲೆಗೆ ವೇದಿಕೆ ರೆಡಿ ಆಗಿದ್ದು, ನಾಳೆ ಅಂದ್ರೆ ಭಾನುವಾರ ದೊಡ್ಮನೆ ಆಟಕ್ಕೆ ತೆರೆ ಬೀಳಲಿದೆ.

ಈ ಬಾರಿಯ ಬಿಗ್​ಬಾಸ್​​ ರಿಯಾಲಿಟಿ ಶೋ ಕಾರ್ಯಕ್ರಮದ ಟಾಪ್​​ 5 ಸ್ಪರ್ಧಿಗಳಲ್ಲಿ ರೇಡಿಯೋ ಜಾಕಿ ರ‍್ಯಾಪಿಡ್ ರಶ್ಮಿ ಹಾಗೂ ಆಂಡಿ ಬಿಗ್​ಬಾಸ್​ ಮನೆಯಿಂದ ಹೊರ ಬಿದ್ದಿದ್ದಾರೆ.

ಗ್ರಾಂಡ್​​ ಫಿನಾಲೆ ವೇಳೆಯೇ ಹೊರಬಿದ್ದಿರುವುದು ರಶ್ಮಿಗೆ ಮತ್ತು ಆಂಡಿ ನಿರಾಸೆ ಮೂಡಿಸಿದ್ದು, ಇಷ್ಟು ದಿನ ಬಿಗ್​ಬಾಸ್​​ ಮನೆಯಲ್ಲಿ ತನ್ನ ನೇರ ಮಾತಿನ ಮೂಲಕ ರ‍್ಯಾಪಿಡ್​​ ರಶ್ಮಿ ಎಲ್ಲರನ್ನು ಸೆಳೆದಿದ್ದರು.

ಸಿಂಗರ್​ ನವೀನ್​ ಸಜ್ಜು, ನಟಿ ಕವಿತಾ, ಶಶಿ, ರ‍್ಯಾಪಿಡ್​ ರಶ್ಮಿ ಮತ್ತು ಆಂಡಿ ಈ ಬಾರಿಯ ಬಿಗ್​ಬಾಸ್​​ ಸೀಸನ್​​ 6 ಶೋನಲ್ಲಿ ಟಾಪ್​ 5 ಸ್ಪರ್ಧಿಗಳಾಗಿದ್ದರು. ಈ ಪೈಕಿ ಇದೀಗ ರ‍್ಯಾಪಿಡ್ ರಶ್ಮಿ ಮತ್ತು ಆಂಡಿ ಹೊರ ಬಿದ್ದಿದ್ದಾರೆ.

ಇನ್ನುಳಿದ ಸ್ಪರ್ಧಿಗಳಾದ ನವೀನ್​ ಸಜ್ಜು, ನಟಿ ಕವಿತಾ, ಶಶಿ ನಾಳೆ [ಭಾನುವಾರ] ನಡೆಯುವ ಗ್ರಾಂಡ್​​ ಫಿನಾಲೆಗೆ ಎಂಟ್ರಿ ಪಡೆದುಕೊಳ್ಳಲಿದ್ದು, ಇದರಲ್ಲಿ ಗೆದ್ದವರು 50 ಲಕ್ಷ ರೂಪಾಯಿ ಮತ್ತು ಆಕರ್ಷಕ ಟ್ರೋಫಿ ಮುಡಿಗೇರಿಸಿಕೊಳಲಿದ್ದಾರೆ.

Comments are closed.