ಮನೋರಂಜನೆ

ಸಿನೆಮಾ ನೋಡಲು ಹಣ ನೀಡದ ಅಪ್ಪನಿಗೆ ಮಗನೇ ಸೀಮೆಎಣೆ ಸುರಿದು ಬೆಂಕಿ ಹಚ್ಚಿದ !

Pinterest LinkedIn Tumblr

ವೆಲ್ಲೂರು: ನಿನ್ನೆಯಷ್ಟೇ ಬಿಡುಗಡೆಯಾಗಿರುವ ಅಜಿತ್ ಅಭಿನಯದ ವಿಶ್ವಸಂ ಚಿತ್ರ ನೋಡಲು ಹಣ ನೀಡದ ಅಪ್ಪನಿಗೆ ಮಗನೇ ಸೀಮೆಎಣೆ ಸುರಿದು ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ವೆಲ್ಲೂರು ಸಮೀಪದ ಕಲಿಂಜುರು ಬಳಿ ನಡೆದಿದೆ.

20 ವರ್ಷ ವಯಸ್ಸಿನ ಮಗ ನಡೆಸಿದ ಹೀನಕೃತ್ಯದಿಂದ ಬೀಡಿ ಸುತ್ತುವ ಕೆಲಸ ಮಾಡುತ್ತಿದ್ದ ಕೆ. ಪಾಂಡಿಯನ್ ಶೇ. 45 ರಷ್ಟು ಸುಟ್ಟ ಗಾಯವಾಗಿದ್ದು ಅಡುಕ್ಕಾಮಬಾರೈಯಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಶ್ವಸಂ ಚಿತ್ರ ನೋಡಲು ಹಣ ನೀಡುವಂತೆ ಬುಧವಾರವೇ ಪಾಂಡಿಯನ್ ಬಳಿ ಆತನ ಮಗ ಅಜಿತ್ ಕುಮಾರ್ ಹಣ ಕೇಳಿದ್ದಾನೆ. ಆದರೆ, ಅವರು ಹಣ ನೀಡಿಲ್ಲ. ಇದರಿಂದಾಗಿ ಆಕ್ರೋಶಗೊಂಡ ಆತ ಎಲ್ಲರೂ ಮಲಗಿರುವ ವೇಳೆಯಲ್ಲಿ ಪಾಂಡಿಯನ್ ಮೇಲೆ ಸೀಮೆ ಎಣ್ಣೆ ಸುರಿದ ಬೆಂಕಿ ಹಚ್ಚಿದ್ದಾನೆ.

ಕೂಗಾಟದ ಸುದ್ದಿ ಕೇಳಿ ಸ್ಥಳಕ್ಕೆ ಧಾವಿಸಿದ ಇತರ ಕುಟುಂಬ ಸದಸ್ಯರು ಹಾಗೂ ನೆರೆಹೊರೆಯವರು ಆತನನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ರಕ್ಷಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿರುತಂಪೇಟೆ ಪೊಲೀಸರು , ಅಜಿತ್ ನನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

Comments are closed.