ಮನೋರಂಜನೆ

ಇತಿಹಾಸ ಬರೆದ ಕೆಜಿಎಫ್: ಪಾಕಿಸ್ತಾನದಲ್ಲಿ ಬಿಡುಗಡೆಯಾದ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರ

Pinterest LinkedIn Tumblr

ಇಸ್ಲಾಮಾಬಾದ್: ಕನ್ನಡ ಚಿತ್ರರಂಗದಲ್ಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಹೊಸ ಇತಿಹಾಸ ನಿರ್ಮಿಸಿದ್ದು, ಪಾಕಿಸ್ತಾನದಲ್ಲಿ ಬಿಡುಗಡೆಯಾಗುವ ಮೂಲಕ ಪಾಕಿಸ್ತಾನದಲ್ಲಿ ಬಿಡುಗಡೆಯಾದ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಪಂಚದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್​ ಸಿನಿಮಾ, ಈಗ ಪಾಕಿಸ್ತಾನದಲ್ಲೂ ತನ್ನ ಹವಾ ಎಬ್ಬಿಸಿದೆ. ಈ ಮೂಲಕ ಪಾಕಿಸ್ತಾನದಲ್ಲಿ ರಿಲೀಸ್​ ಆದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್​ ಪಾತ್ರವಾಗ್ತಿದೆ. ಪಾಕಿಸ್ತಾನದಲ್ಲಿ ಟಿಕೆಟ್​ ಬುಕ್ಕಿಂಗ್​ ಆರಂಭವಾಗಿದ್ದು, ಇಸ್ಲಾಮಾಬಾದ್ ಕ್ಲಬ್ ಟಿಕೆಟ್ ಬುಕ್ಕಿಂಗ್ ಸೈಟ್ ನಲ್ಲಿ ಇಂದಿನಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ಇನ್ನು ಪಾಕಿಸ್ತಾನಿಗರಿಗೆ ಭಾರತೀಯ ಸಿನಿಮಾಗಳು ಹೊಸದೇನಲ್ಲ. ಸಾಮಾನ್ಯವಾಗಿ ಹಿಂದಿ ಸಿನಿಮಾಗೆ ದೊಡ್ಡ ಅಭಿಮಾನಿ ಬಳಗ ಪಾಕಿಸ್ತಾನದಲ್ಲಿದೆ. ಪ್ರಮುಖವಾಗಿ ಸಲ್ಮಾನ್‌ಖಾನ್, ಶಾರುಖ್‌ ಖಾನ್ ಸಿನಿಮಾಗಳನ್ನು ಪಾಕಿಸ್ತಾನಿ ಪ್ರಜೆಗಳು ಹೆಚ್ಚು ಇಷ್ಟ ಪಡುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಪಾಕಿಸ್ತಾನದಲ್ಲಿ ತೆರೆ ಕಂಡಿದೆ.

ಟ್ರೈಲರ್ ನೋಟಿ ಫಿದಾ ಆಗಿದ್ದ ಪಾಕ್ ಅಭಿಮಾನಿಗಳು
ಇನ್ನು ಕೆಜಿಎಫ್ ಸಿನಿಮಾ ಬಿಡುಗಡೆಗೂ ಮೊದಲೇ ಪಾಕಿಸ್ತಾನದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಟ್ರೈಲರ್‌ ನೋಡಿ ದಂಗಾಗಿದ್ದ ಅಲ್ಲಿನ ಜನ ಕೆಜಿಎಫ್‌ ರಿಲೀಸ್ ಗಾಗಿ ಕಾಯುತ್ತಿದ್ದರು. ಅಲ್ಲೂ ಸಿನಿಮಾದ ಮ್ಯೂಸಿಕ್​, ಡೈಲಾಗ್ ಎಲ್ಲವೂ ಟ್ರೆಂಡ್​ ಸೃಷ್ಟಿಸಿದ್ವು. ಪಾಕಿಸ್ತಾನಿ ಯುವಕನೊಬ್ಬ ‘ಕೆಜಿಎಫ್​ ಟ್ರೈಲರ್’ ನೋಡಿ ‘ಇದೊಂದು ಗ್ರೇಟ್​ ಟ್ರೈಲರ್​’..!. ಮಾಮೂಲಿ ಸಲ್ಮಾನ್​ ಖಾನ್​ ಸಿನಿಮಾ ಇದಲ್ಲ. ಸಲ್ಮಾನ್​ ಸಿನಿಮಾಗೂ ಮೀರಿದ ಸಿನಿಮಾ. ನಾನಂತೂ ಖಂಡಿತಾ ಸಿನಿಮಾ ನೋಡ್ತೀನಿ’ ಅಂತಾ ಮನಸಾರೆ ಹೊಗಳಿ ತನ್ನ ಅನಿಸಿಕೆ ವ್ಯಕ್ತಪಡಿಸಿದ್ದ. ಈಗ ಕೆಜಿಎಫ್‌ ಪಾಕಿಸ್ತಾನದಲ್ಲಿ ನಾಗಾಲೋಟ ಮುಂದುವರೆಸಿದೆ.

ಈ ಹಿಂದೆ ಪವನ್ ನಿರ್ದೇಶನದ ಲೂಸಿಯಾ ಚಿತ್ರ ಪ್ರದರ್ಶನದ ಕುರಿತು ಮಾತು ಕೇಳಿ ಬಂದಿತ್ತಾದರೂ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ.

Comments are closed.