ಮನೋರಂಜನೆ

ಹೊಸ ರೇಂಜ್ ರೋವರ್ ಕಾರು ಜೊತೆ ಹಳೆಯ ಟಿವಿಎಸ್ ಸ್ಕೂಟರಿಗೂ ಪೂಜೆ ಸಲ್ಲಿಸಿದ ನಟ ಧನಂಜಯ್

Pinterest LinkedIn Tumblr

ಬೆಂಗಳೂರು: ಟಗರು ಚಿತ್ರದಲ್ಲಿನ ಡಾಲಿ ಪಾತ್ರದ ಮೂಲಕ ಕನ್ನಡ ನಾಡಿನ ಮನೆಮನಗಳಲ್ಲಿ ಮಾತಾಗಿರುವ ನಟ ಧನಂಜಯ್ ಭೈರವ ಗೀತ ಚಿತ್ರದ ಅದ್ಬುತ ಅಭಿನಯದ ಮೂಲಕವೂ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಸಹ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ.

ಮೊದಲೆಲ್ಲಾ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಧನಂಜಯ್ ಅವರಿಗೆ ಟಗರು ಚಿತ್ರ ಹೆಚ್ಚಿನ ಹೆಸರು, ಖ್ಯಾತಿಯನ್ನು ತಂದುಕೊಟ್ಟಿತ್ತು. ನಂತರ ತನ್ನ ಪ್ರತಿಭೆಯಿಂದಲೇ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಧನಂಜಯ್ ಈಗ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದ್ದಾರೆ.

https://www.facebook.com/dhananjaya.ka/posts/2422992967714067

ಬಡತನದಿಂದಲೇ ಬೆಳೆದು ಬಂದ ಧನಂಜಯ್ ಇತ್ತೀಚಿಗೆ ರೇಂಜ್ ರೋವರ್ ಕಾರನ್ನು ಖರೀದಿಸಿದ್ದು, ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿಸಿದ್ದಾರೆ. ಇದೇ ವೇಳೆ ಅಪ್ಪ ಕೊಡಿಸಿದ್ದ ಟಿವಿಎಸ್ ಸ್ಕೂಟರ್ ಗೂ ಪೂಜೆ ಮಾಡಿಸಿದ್ದಾರೆ.

ಈ ವಿಷಯವನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಧನಂಜಯ್, ಅಪ್ಪ ಕೊಡಿಸಿದ್ದು, ಟಿವಿಎಸ್ ಸ್ಕೂಟರ್ ನೀವು ಕೊಡಿಸಿದ್ದು, ರೇಂಜ್ ರೋವರ್ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Comments are closed.