ಮನೋರಂಜನೆ

ಕೆಜಿಎಫ್: ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ!

Pinterest LinkedIn Tumblr


ಬೆಂಗಳೂರು: ವಿಶ್ವವ್ಯಾಪಿ ಅದ್ಧೂರಿ ಎಂಟ್ರಿಕೊಟ್ಟಿರುವ ಕೆಜಿಎಫ್ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ವಿಶ್ವಾದ್ಯಂತ 2000 ಸ್ಕ್ರೀನ್‍ಗಳಲ್ಲಿ ದರ್ಶನ ಕೊಟ್ಟಿರುವ `ಕೆಜಿಎಫ್’ ಸಿನಿಮಾ, ಮೊದಲ ದಿನವೇ 25 ಕೋಟಿ ಕಲೆಕ್ಷನ್ ಕಂಡಿದೆ.

ಕನ್ನಡದಲ್ಲೇ 13 ರಿಂದ 15 ಕೋಟಿ ಕಲೆಕ್ಷನ್ ಆಗಿದೆ ಎಂದು ಚಿತ್ರದ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ. ಸ್ಟಾರ್ ಸಿನಿಮಾಗಳನ್ನ ಹಿಂದಿಕ್ಕಿ ಥಿಯೇಟರ್ ಅಖಾಡದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ರಾಕಿಂಗ್‍ಸ್ಟಾರ್ `ಕೆಜಿಎಫ್’, ಸರ್ವದಾಖಲೆಗಳನ್ನ ಮುರಿದು 100 ಕೋಟಿ ಬಾಕ್ಸ್‍ಆಫೀಸ್‍ನಲ್ಲಿ ಬಾಚಿಕೊಳ್ಳುವುದರಲ್ಲಿ ಸಂಶಯವಿಲ್ಲ ಎನ್ನುವ ಮಾತುಗಳನ್ನು ಈಗ ಕನ್ನಡ ಅಭಿಮಾನಿಗಳು ಹೇಳುತ್ತಿದ್ದಾರೆ.

ಮೊದಲ ದಿನದ ಕಲೆಕ್ಷನ್ ನೋಡಿದ್ರೆ ವೀಕೆಂಡ್ ಜೊತೆ ಕ್ರಿಸ್ಮಸ್ ರಜೆಯೂ ಇರುವ ಕಾರಣ 100 ಕೋಟಿ ಕ್ಲಬ್ ಸೇರುವ ಎಲ್ಲ ಮುನ್ಸೂಚನೆಯನ್ನು ಕೆಜಿಎಫ್ ನೀಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಬಾಕ್ಸ್ ಆಫೀಸ್‍ನಲ್ಲಿ 100 ಕೋಟಿ ರೂ. ಗಳಿಸಿದ ಮೊದಲ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ಕೆಜಿಎಫ್ ಪಾತ್ರವಾಗಲಿದೆ.

Comments are closed.