
ಬೆಂಗಳೂರು: ದೇಶದ ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ಇಂಟರ್ ನೆಟ್ ಮೂವಿ ಡೇಟಾ ಬೇಸ್ (ಐಎಂಡಿಬಿ) ಖ್ಯಾತ ಸಿನಿಮಾ ಡೇಟಾಬೇಸ್ ವೆಬ್‍ಸೈಟ್ ಪ್ರಕಟಿಸಿದೆ.
ಕೆಜಿಎಫ್: ಚಾಪ್ಟರ್ 1 ಇದೇ ಶುಕ್ರವಾರ ದೇಶಾದ್ಯಂತ ಬಿಡುಗಡೆ ಆಗಲು ಸಿದ್ಧಗೊಂಡಿದೆ. ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದಲ್ಲ ಸಿನಿಮಾ ಮೂಡಿ ಬಂದಿದ್ದು, ಚಿತ್ರ ನೋಡಲು ಅಭಿಮಾನಿಗಳು ಟಿಕೆಟ್ ಕೌಂಟರ್ ನಲ್ಲಿ ಕಾಯುತ್ತಿದ್ದಾರೆ. ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿ ಆರಂಭದ ಶೋಗಳ ಟಿಕೆಟ್ ಖರೀದಿಯಾಗಿದ್ದು, ಬಹುತೇಕ ಕಡೆ ಹೌಸ್ ಫುಲ್ ಎಂಬ ಬೋರ್ಡ್ ಕಾಣಿಸುತ್ತಿದೆ.
ಬಾಲಿವುಡ್ ಡಾನ್ ಶಾರೂಖ್ ಖಾನ್ ಅಭಿನಯದ ಝೀರೋ ಸಿನಿಮಾ ಸಹ ಇದೇ ಶುಕ್ರವಾರ ತೆರೆಕಾಣಲಿದೆ. ಬಹುತಾರಾಗಣವುಳ್ಳ ಸಿನಿಮಾ ಆಗಿದ್ದರೂ, ಎರಡನೇ ಸ್ಥಾನದಲ್ಲಿದೆ. ಕೆಜಿಎಫ್ ಸಿನಿಮಾ ನೋಡಲು ಶೇ. 81ರಷ್ಟು ಜನರು ಕಾಯುತ್ತಿದ್ದಾರೆ. ಶೇ.11.7ರಷ್ಟು ಜನರು ಝೀರೋ ಸಿನಿಮಾ ನೋಡುವ ನಿರೀಕ್ಷೆಯಲ್ಲಿದ್ದಾರೆ.
ಭೂಗತ ಲೋಕದ ಕರಾಳ ಸತ್ಯವನ್ನು ಕೆಜಿಎಫ್ ತೋರಿಸಲಿದೆ ಎಂಬುವುದನ್ನು ಟ್ರೇಲರ್ ಸಾರಿ ಸಾರಿ ಹೇಳುತ್ತಿದೆ. ಓರ್ವ ಕಥಾನಾಯಕನ ಜೀವನದ ಏರುಪೇರುಗಳನ್ನು ತುಂಬಾ ಸ್ಪಷ್ಟವಾಗಿ ಪ್ರಶಾಂತ್ ನೀಲ್ ತೋರಿಸುವ ಪ್ರಯತ್ನ ಟ್ರೇಲರ್ ನಲ್ಲಿ ಕಾಣುತ್ತಿದೆ. ಇನ್ನು ಟೀಸರ್ ಆರಂಭದಲ್ಲಿ ಕೇಳಿಬರುವ ಹಿನ್ನೆಲೆ ಧ್ವನಿ ಟ್ರೇಲರ್ ನಲ್ಲಿ ನೋಡುಗರಲ್ಲಿ ರೋಮ ರೋಮಗಳಲ್ಲಿ ರೋಮಾಂಚನ ಮಾಡುವಲ್ಲಿ ಯಶ್ವಸಿಯಾಗಿದೆ.
Comments are closed.