ಮನೋರಂಜನೆ

ಮತ್ತೊಂದು ದಾಖಲೆ ಮಾಡಿದ ‘ಕೆಜಿಎಫ್’; ಒಂದೇ ದಿನಕ್ಕೆ ಚಿತ್ರದ 6,600 ಟಿಕೆಟ್ ಸೋಲ್ಡ್ ಔಟ್..!

Pinterest LinkedIn Tumblr

ಬೆಂಗಳೂರು: ಅನ್ಯ ಭಾಷಾ ಚಿತ್ರಗಳೇ ಅಬ್ಬರಿಸುವ ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ ಕನ್ನಡ ಚಿತ್ರವೊಂದು ದಾಖಲೆ ನಿರ್ಮಾಣ ಮಾಡಿದ್ದು, ಈ ಹಿಂದೆ ಇದೇ ಥಿಯೇಟರ್ ನಲ್ಲಿ ಪ್ರಭಾಸ್ ಅಭಿನಯದ ಬಾಹುಬಲಿ 2 ನಿರ್ಮಿಸಿದ್ದ ಅತೀ ಹೆಚ್ಚು ಟಿಕೆಟ್ ಮಾರಾಟ ದಾಖಲೆಯನ್ನು ಕೆಜಿಎಫ್ ಚಿತ್ರ ಧೂಳಿಪಟ ಮಾಡಿದೆ.

ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿರುವ ಕನ್ನಡದ ಕೆಜಿಎಫ್ ಚಿತ್ರ ಬಿಡುಗಡೆಗೆ ಕೇವಲ ಮೂರು ದಿನ ಬಾಕಿ ಇದ್ದು, ಈಗಾಗಲೇ ಚಿತ್ರದ ಕುರಿತ ಹವಾ ಭಾರಿ ಜೋರಾಗಿದೆ. ಇದಕ್ಕೆ ಇಂಬು ನೀಡುವಂತೆ ಈಗಾಗಲೇ ಚಿತ್ರದ ಟಿಕೆಟ್ ಗಾಗಿ ಭಾರಿ ಬೇಡಿಕಂಡುಬರುತ್ತಿದ್ದು, ಕೆಜಿಎಫ್‌ ಕ್ರೇಜ್‌ ಎಷ್ಟರ ಮಟ್ಟಿಗೆ ಇದೆ ಅಂದರೆ ಚಿತ್ರದ ಟಿಕೆಟ್ ಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿದೆ.

ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ ಟಿಕೆಟ್‌ ಬುಕ್‌ ಮಾಡೋಣ ಅಂತಾ ನೀವೇನಾದ್ರೂ ಅಂದುಕೊಂಡಿದ್ರೆ, ಅದನ್ನ ಮರೆತುಬಿಡಿ. ರಿಲೀಸ್‌ ಆದ ದಿನ ಅಲ್ಲ ರಿಲೀಸ್‌ ಆಗಿ 3 ದಿನಗಳವರೆಗೂ ಟಿಕೆಟ್‌ ಸಿಗೋ ಛಾನ್ಸೇ ಇಲ್ಲ. ಯಾಕಂದ್ರೆ ಊವರ್ಶಿ ಥಿಯೇಟರ್‌ನಲ್ಲಿ ಕೆಜಿಎಫ್ ಟಿಕೆಟ್ಸ್ ಕಂಪ್ಲೀಟ್‌ ಸೋಲ್ಡ್‌ ಔಟ್ ಆಗಿದ್ದು, ದಾಖಲೆಯ ಮಾರಾಟ ಕಂಡಿದೆ. ಒಂದೇ ದಿನದಲ್ಲಿ ಆರು ಶೋಗಳ 6,600 ಟಿಕೆಟ್ ಸೋಲ್ಡ್ ಔಟ್ ಆಗಿದೆ. ಅಷ್ಟೇ ಅಲ್ಲ, 2-3ನೇ ದಿನದ ಟಿಕೆಟ್ ಕೂಡ ಬಹುತೇಕ ಸೋಲ್ಡ್ ಔಟ್ ಆಗಿದೆ.

ಹೌದು ಈ ಬಗ್ಗೆ ಸ್ವತಃ ಊರ್ವಶಿ ಚಿತ್ರಮಂದಿರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದ್ದು, ಕೆಜಿಎಫ್ ಚಿತ್ರದ ಟಿಕೆಟ್ ನೀಡಲು ಆರಂಭಿಸಿದ ಒಂದೇ ದಿನದಲ್ಲಿ ಬರೊಬ್ಬರಿ 6600 ಟಿಕೆಟ್ ಗಳು ಮಾರಾಟವಾಗಿವೆ. ಕೆಜಿಎಫ್‌ ರಿಲೀಸ್ ಡೇಟ್‌ ಗೊತ್ತಾಗಿದ್ದೇ ತಡ ಆ ಕ್ಷಣದಿಂದ ಕೆಜಿಎಫ್‌ ಟಿಕೆಟ್‌ ಕೊಳ್ಳೋಕೆ ಅಭಿಮಾನಿಗಳು ಆತುರದಲ್ಲಿದ್ದಾರೆ. ಕಳೆದ ಭಾನುವಾರದಿಂದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಬುಕಿಂಗ್‌ ಶುರುವಾದ ಕೆಲವೇ ಗಂಟೆಗಳಲ್ಲಿ ಮುಗಿಬಿದ್ದು ಟಿಕೆಟ್ ಖರೀದಿಸಿದ್ದಾರೆ. ಆನ್ ಲೈನ್ ಫೇಮಸ್ ಟಿಕೆಟ್‌ ಬುಕಿಂಗ್ ವೆಬ್ ಸೈಟ್‌ ಬುಕ್‌ ಮೈ ಶೋ.ಕಾಮ್‌ ನಲ್ಲಿ ಸಿಗ್ತಿರೋ ಮಾಹಿತಿ ಪ್ರಕಾರ ಬೆಂಗಳೂರಿನ ಸಾಕಷ್ಟು ಚಿತ್ರಮಂದಿರಗಳಲ್ಲಿ, ಮಲ್ಟಿಪ್ಲೆಕ್ಸ್‌ಗಳಲ್ಲಿ ಈಗಾಗ್ಲೇ ಕೆಜಿಎಫ್‌ ಟಿಕೆಟ್ಸ್‌ ಫುಲ್ ಸೋಲ್ಡ್‌ ಔಟ್. ಈ ಸಾಲಿಗೆ ಈಗ ಊರ್ವಶಿ ಥಿಯೇಟರ್‌ ಕೂಡ ಸೇರಿದೆ. ಇಲ್ಲಿ ಒಂದು ಟಿಕೆಟ್ ಬೆಲೆ 250 ರಿಂದ 300ರೂಪಾಯಿ ಇರಲಿದೆ. ಬಹುತೇಕ ಕಡೆ ಮುಕ್ಕಾಲು ಭಾಗ ಸೀಟ್ ಗಳು ಭರ್ತಿ ಆಗಿವೆ.

ಊರ್ವಶಿಯಲ್ಲಿ ದಾಖಲೆ ಬರೆದ ಕೆಜಿಎಫ್
ಇನ್ನು ಪರಭಾಷಾ ಚಿತ್ರಗಳ ಚಿತ್ರಮಂದಿರ ಎಂದೇ ಕರೆಯಲಾಗುತ್ತಿದ್ದ ಊರ್ವಶಿ ಥಿಯೇಟರ್ ನಲ್ಲಿ ಇದೇ ಮೊದಲ ಬಾರಿ ಎಂಬಂತೆ ಕನ್ನಡ ಚಿತ್ರವೊಂದಕ್ಕೆ ಭಾರಿ ಬೇಡಿಕೆ ಕಂಡುಬಂದಿದೆ. ಕೆಜಿಎಫ್ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾದ ಕೇವಲ ನಿಮಿಷದಲ್ಲೇ ಬರೊಬ್ಬರಿ 1100 ಟಿಕೆಟ್ ಗಳು ಬುಕ್ ಆಗಿದ್ದವು. ಅಲ್ಲದೆ ಕೇವಲ ಒಂದು ದಿನದಲ್ಲಿ 6600 ಟಿಕೆಟ್ ಗಳು ಬುಕ್ ಆಗುವ ಮೂಲಕ ಊರ್ವಶಿ ಥಿಯೇಟರ್ ಇತಿಹಾಸದಲ್ಲೇ ಕೆಜಿಎಫ್ ನೂತನ ದಾಖಲೆ ಬರೆದಿದೆ. ಈ ಹಿಂದೆ ಅತೀ ಹೆಚ್ಚು ಟಿಕೆಟ್ ಬುಕ್ಕಾದ ಚಿತ್ರಗಳ ಪಟ್ಟಿಯಲ್ಲಿ ಬಾಹುಬಲಿ-2 ಇತ್ತು. ಇದೀಗ ಆ ಚಿತ್ರದ ದಾಖಲೆಯನ್ನೂ ಕೆಜಿಎಫ್ ಹಿಂದಿಕ್ಕಿದೆ.

ಈ ಹಿಂದೆ ಸಾಕಷ್ಟು ಬಾರಿ ಕರ್ನಾಟಕದಲ್ಲೇ ಪರಭಾಷಾ ಸಿನಿಮಾಗಳ ಹಾವಳಿಯಿಂದ ಕನ್ನಡ ಸಿನಿಮಾಗಳಿಗೆ ಸ್ಕ್ರೀನ್‌ ಸಿಗದಿರೋ ಸಮಸ್ಯೆ ಎದುರಾಗಿತ್ತು. ಆದ್ರೆ ಕನ್ನಡದ ಕೆಜಿಎಫ್‌ಗೆ, ಸದ್ಯ ರಿಲೀಸ್ ಆಗಿ ಪ್ರದರ್ಶನ ಕಾಣುತ್ತಿರೋ ತಮಿಳು, ತೆಲುಗು ಸಿನಿಮಾಗಳಿಗಿಂತಲೂ ಬುಕ್ಕಿಂಗ್ ಜೋರಾಗಿದೆ. ಅಲ್ಲದೆ ಕೆಜಿಎಫ್ ನಿಂದಾಗಿ ಇದೀಗ ಕರ್ನಾಟಕದಲ್ಲಿ ಹಲವು ಪರಭಾಷಾ ಚಿತ್ರಗಳು ಎತ್ತಂಗಡಿ ಭೀತಿ ಎದುರಿಸುವಂತಾಗಿದೆ.

Comments are closed.