
ಹೈದರಾಬಾದ್: ಟಾಲಿವುಡ್ ಸೂಪರ್ ಚಿತ್ರವಾದ ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ಸಾಹೋ’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. 2019 ಆಗಸ್ಟ್ 15ರಂದು ಸಾಹೋ ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.
ಮುಂದಿನ ವರ್ಷದ ಆಗಸ್ಟ್ 15 ರಂದು ಬಾಲಿವುಡ್ ನ ಅಕ್ಷಯ್ ಕುಮಾರ್ ಅಭಿನಯದ `ಮಿಷನ್ ಮಂಗಲಾ’ ಮತ್ತು ಜಾನ್ ಅಬ್ರಾಹಂ ನಟನೆಯ `ಬಟ್ಲಾ ಹೌಸ್’ ಚಿತ್ರಗಳು ತೆರೆಕಾಣಲಿವೆ. ಹೀಗಾಗಿ ಒಂದೇ ದಿನ ಮೂರು ಸ್ಟಾರ್ ಗಳ ಸಿನಿಮಾ ಬಿಡುಗಡೆಯಾಗಲು ಸಿದ್ಧಗೊಂಡಿದ್ದು, ಪ್ರೇಕ್ಷಕ ಪ್ರಭು ಯಾರಿಗೆ ಜೈ ಅಂತಾನೇ ಎಂದು ಕಾದು ನೋಡಬೇಕಿದೆ.
ಪ್ರಭಾಸ್ ಹುಟ್ಟುಹಬ್ಬದಂದು ಚಿತ್ರತಂಡ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿತ್ತು. ಸತತ ಎರಡು ವರ್ಷಗಳಿಂದ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಸಿನಿಮಾದ ಕಥೆ ಅಥವಾ ಫೋಟೋಗಳನ್ನ ಚಿತ್ರತಂಡ ಇದೂವರೆಗೂ ಹೊರ ಹಾಕಿಲ್ಲ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ನಟನೆ ಚಿತ್ರ ಬಿಡುಗಡೆಯಾಗಲು ಸಿದ್ಧವಾಗಿದೆ. ಆಶೀಕಿ ಬೆಡಗಿ ಶ್ರದ್ಧಾ ಕಪೂರ್ ಸಾಹೋ ಸಿನಿಮಾ ಮೂಲಕ ಟಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಸಿನಿಮಾ ಸುಜೀತ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ವಂಶಿ ಕೃಷ್ಣ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಶಂಕರ್-ಇಹಾಸನ್-ಲಾಯ್ ಸಂಗೀತವಿದೆ. ಸಾಹೋ ತೆಲಗು,ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರಲಿದೆ.
Comments are closed.