ಮನೋರಂಜನೆ

ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್‌ಗೆ ಎದುರಾಗಿದೆ ಸಂಕಷ್ಟದ ಸ್ಥಿತಿ !

Pinterest LinkedIn Tumblr

ಆಕ್ಷನ್ ಪ್ರಿನ್ಸ್ ಅರ್ಜುನ್ ಸರ್ಜಾ ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು #MeToo ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಗೆ ಸದ್ಯ ಸಂಕಷ್ಟದ ಸರಮಾಲೆ ಎದುರಾಗಿದೆ.

ಮೀಟೂ ಆರೋಪ ಮಾಡಿದ ನಂತರ ನನಗೆ ಸಿನಿಮಾ ಅವಕಾಶಗಳೇ ಕಡಿಮೆಯಾಗಿವೆ. ಇಲ್ಲದೆ ಕೆಲ ಚಿತ್ರಗಳಲ್ಲಿ ಆಯ್ಕೆಯಾಗಿದ್ದರೂ ನಂತರ ಆ ಸಿನಿಮಾಗಳಿಂದ ಅವಕಾಶ ತಪ್ಪಿದೆ. ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡುವ ಮೊದಲು ವಾರಕ್ಕೆ 3 ಚಿತ್ರಗಳ ಆಫರ್ ಬರುತ್ತಿತ್ತು. ಆದರೆ ಈಗ ಯಾವುದೇ ಆಫರ್ ಗಳು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ ತಿಂಗಳಲ್ಲಿ ನಾನು ಅಭಿನಯಿಸಿದ್ದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಯಶಸ್ವಿ ಪ್ರದರ್ಶನವನ್ನೂ ಕಂಡಿತ್ತು. ಆದರೆ ಯಾಕೋ ಯಾವ ಒಳ್ಳೆಯ ಆಫರ್ ಗಳೂ ಬರುತ್ತಿಲ್ಲ. ಸೆಪ್ಟೆಂಬರ್ ತಿಂಗಳ ನಂತರ ಹೆಚ್ಚೆಂದರೆ 2 ಚಿತ್ರಗಳ ಆಫರ್ ಬಂದಿರಬಹುದು. ಆದರೆ ಕತೆ ಹಾಗೂ ಪಾತ್ರಗಳು ನನಗೆ ಇಷ್ಟವಾಗದ ಕಾರಣ ನಾನು ಅವರನ್ನು ತಿರಸ್ಕರಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.

Comments are closed.