ಮನೋರಂಜನೆ

ಫೋರ್ಬ್ಸ್ ಟಾಪ್ 100 ಭಾರತೀಯ ಸೆಲೆಬ್ರಿಟಿ – ಸಲ್ಮಾನ್, ಕೊಹ್ಲಿ, ದೀಪಿಕಾ ಮೋಡಿ- ಯಾರ ಆದಾಯ ಎಷ್ಟು ಕೋಟಿ?

Pinterest LinkedIn Tumblr


ನವದೆಹಲಿ: ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತದ ಶ್ರೀಮಂತ ಕ್ರೀಡಾಪಟು ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕಳೆದ ವರ್ಷದಂತೆ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಅವರನ್ನು ಹಿಂದಿಕ್ಕಿ ಈ ವರ್ಷವೂ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ.

ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿರುವ 2018ರ ಟಾಪ್ ಸೆಲೆಬ್ರಿಟಿ ಪಟ್ಟಿಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಂ.1 ಸ್ಥಾನ ಪಡೆದಿದ್ದು, 2ನೇ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ. 2018 ಸಾಲಿನಲ್ಲಿ ಸಲ್ಮಾನ್ ಖಾನ್ 253.25 ಕೋಟಿ ರೂ. ಆದಾಯ ಗಳಿಸಿದ್ದರೆ ಕೊಹ್ಲಿ 228.09 ಕೋಟಿ ರೂ. ಆದಾಯದೊಂದಿಗೆ 3ನೇ ಸ್ಥಾನದಿಂದ ಈ ಬಾರಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. 2017ನೇ ಸಾಲಿನಲ್ಲಿ ಕೊಹ್ಲಿ 100.72 ಕೋಟಿ ರೂ. ಗಳಿಸಿದ್ದು, ಈ ಬಾರಿ ಶೇ. 116.53 ರಷ್ಟು ಆದಾಯ ಹೆಚ್ಚಾಗಿದೆ.

ಉಳಿದಂತೆ ಪಟ್ಟಿಯಲ್ಲಿ ಎಂಎಸ್ ಧೋನಿ 101.77 ಕೋಟಿ ರೂ. ಆದಾಯದೊಂದಿಗೆ 5ನೇ ಸ್ಥಾನದಲ್ಲಿದ್ದು, 80 ಕೋಟಿ ರೂ. ಆದಾಯದೊಂದಿಗೆ ಸಚಿನ್ ತೆಂಡೂಲ್ಕರ್ 9ನೇ ಸ್ಥಾನದಲ್ಲಿದ್ದಾರೆ. 2018 ರ ಸಾಲಿನಲ್ಲಿ ದೇಶದ ಅತಿ ಶ್ರೀಮಂತ ಕ್ರೀಡಾಪಟುಗಳ ಪೈಕಿ ಹೆಚ್ಚಿನವರು ಕ್ರಿಕೆಟಿಗರಾಗಿದ್ದು, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ 2018 ಕ್ರೀಡಾಪಟುಗಳು:
ವಿರಾಟ್ ಕೊಹ್ಲಿ- 228.09 ಕೋಟಿ ರೂ.
ಎಂಎಂಸ್ ಧೋನಿ- 101.77 ಕೋಟಿ ರೂ.
ಸಚಿನ್ ತೆಂಡೂಲ್ಕರ್- 80 ಕೋಟಿ ರೂ.

ಪಿವಿ ಸಿಂಧೂ- 36.5 ಕೋಟಿ ರೂ.
ರೋಹಿತ್ ಶರ್ಮಾ – 31.49 ಕೋಟಿ ರೂ.
ಹಾರ್ದಿಕ್ ಪಾಂಡ್ಯ- 28.46 ಕೋಟಿ ರೂ

ಆರ್ ಅಶ್ವಿನ್- 18.9 ಕೋಟಿ ರೂ.
ಭುವನೇಶ್ವರ್ ಕುಮಾರ್ – 17.3 ಕೋಟಿ ರೂ.
ಸುರೇಶ್ ರೈನಾ – 17.0 ಕೋಟಿ ರೂ.

ಟಾಪ್ ಸೆಲೆಬ್ರಿಟಿ:
ಸಲ್ಮಾನ್ ಖಾನ್ – 253.25 ಕೋಟಿ ರೂ.
ಅಕ್ಷಯ್ ಕುಮಾರ್ – 185 ಕೋಟಿ ರೂ.
ದೀಪಿಕಾ ಪಡುಕೋಣೆ – 112.8 ಕೋಟಿ ರೂ.

ಅಮೀರ್ ಖಾನ್ – 97.50 ಕೋಟಿ ರೂ.
ಅಮಿತಾಭ್ ಬಚ್ಚನ್ – 96.17 ಕೋಟಿ ರೂ.
ರಣವೀರ್ ಸಿಂಗ್ – 84.7 ಕೋಟಿ ರೂ.
ಅಜಯ್ ದೇವಗನ್ – 74.50 ಕೋಟಿ ರೂ.

ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕಳೆದ ಬಾರಿ 107.50 ಕೋಟಿ ರೂ. ಆದಾಯದೊಂದಿಗೆ ಟಾಪ್ 2ನೇ ಸ್ಥಾನ ಪಡೆದಿದ್ದ ಶಾರುಖ್ ಖಾನ್ ಈ ಬಾರಿ 56 ಕೋಟಿ ರೂ. ಆದಾಯದೊಂದಿಗೆ 13ನೇ ಸ್ಥಾನ ಪಡೆದಿದ್ದು, ಟಾಪ್ 10 ಪಟ್ಟಿಯಿಂದಲೇ ಹೊರ ಬಿದ್ದಿದ್ದಾರೆ. ಕಳೆದ ವರ್ಷ ಶಾರುಖ್ ಖಾನ್ ಅವರ ಯಾವುದೇ ಹೊಸ ಚಿತ್ರ ಬಿಡುಗಡೆ ಆಗದಿರುವುದೇ ಆದಾಯ ಕಡಿಮೆ ಆಗಲು ಕಾರಣವಾಗಿದೆ.

ವಿಶೇಷ ಎಂಬಂತೆ ನಟಿ ದೀಪಿಕಾ ಪಡುಕೋಣೆ 112.8 ಕೋಟಿ ರೂ. ಆದಾಯ ಗಳಿಸುವ ಮೂಲಕ ಟಾಪ್ 5 ಸ್ಥಾನಲ್ಲಿದ್ದಾರೆ. 45.83 ಕೋಟಿ ರೂ. ಆದಾಯದೊಂದಿಗೆ ಅನುಷ್ಕಾ ಶರ್ಮಾ 16ನೇ ಸ್ಥಾನವನ್ನು ಪಡೆದಿದ್ದಾರೆ.

Comments are closed.