ಮನೋರಂಜನೆ

ದಿಗಂತ್​-ಐಂದ್ರಿತಾ ಮದುವೆಗೆ ಹೋಗುವವರಿಗೂ ಡ್ರೆಸ್​ ಕೋಡ್..!​

Pinterest LinkedIn Tumblr

ದೂಧ್​ಪೇಡಾ ದಿಗಂತ್​ ಹಾಗೂ ಐಂದ್ರಿತಾ ರೇ ವಿವಾಹವಾಗುತ್ತಿರುವ ವಿಷಯ ತಿಳಿದಿರುವುದೆ. ಡಿ.12ರಂದು ಈ ಹಾಟ್​ ಜೋಡಿಯ ಮದುವೆ ನಡೆಲಿದ್ದು, ಲಗ್ನಪತ್ರಿಕೆ ಸಹ ಪ್ರಿಂಟ್​ ಆಗಿದೆ.

ದಿಗ್ಗಿ-ಐಂದ್ರಿತಾ ಮದುವೆಗೆ ದಿನ ಗಣನೆ ಆರಂಭವಾಗಿದ್ದು, ಮದುವೆಗೆ ಜೋರಾಗಿ ಸಿದ್ಧತೆ ನಡೆಯುತ್ತಿದೆ. ಈ ವಿವಾಹದಲ್ಲಿ ಒಂದು ವಿಶೇಷತೆ ಇದೆ. ಹೌದು ಇವರ ಮದುವೆಗೆ ಹೋಗುವವರು ಭಾರತೀಯ ಶೈಲಿಯಲ್ಲಿ ವಸ್ತ್ರಗಳನ್ನು ತೊಟ್ಟು ಹೋಗಬೇಕಂತೆ. ಅದಕ್ಕಾಗಿಯೇ ಅವರ ವಿವಾಹದ ಲಗ್ನ ಪತ್ರಿಕೆ ಮೇಲೆ ಅದನ್ನು ಪ್ರತ್ಯೇಕವಾಗಿ ಪ್ರಿಂಟ್​ ಮಾಡಿಸಲಾಗಿದೆ.

ದಿಗ್ಗಿ-ಆ್ಯಂಡಿ ವಿವಾಹಕ್ಕೆ ಹೋಗುವವರು ಅಪ್ಪಟ ಭಾರತೀಯರಾಗಿ ಹೋಗಬೇಕೆಂಬುದು ಮದುಮಕ್ಕಳ ಆಸೆಯಂತೆ. ಡಿ.11-12ರಂದು ಸರಳವಾಗಿ ನಡೆಯಲಿರುವ ವಿವಾಹಕ್ಕೆ ಕೇವಲ ಕುಟುಂಬದ ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿದೆಯಂತೆ. ಡಿ.16ರಂದು ಚಂದನವನದ ಸೆಲೆಬ್ರಿಟಿಗಳಿಗಾಗಿ ಔತಣಕೂಟವನ್ನೂ ಆಯೋಜಿಸಲಾಗಿದೆಯಂತೆ.

ಈ ಕ್ಯೂಟ್​ ಕಪಲ್​ ತಮ್ಮ ವಿವಾಹಕ್ಕೆ ಎರಡು ರೀತಿಯ ಲಗ್ನಪತ್ರಿಕೆಯನ್ನು ಮಾಡಿಸಿದ್ದು, ಕುಟುಂಬದವರಿಗೆ ಹಾಗೂ ಗಣ್ಯರಿಗೆ ಪ್ರತ್ಯೇಕ ಆಹ್ವಾನ ಪತ್ರಿಕೆ ನೀಡಲಾಗುತ್ತಿದೆಯಂತೆ. ಮಂಚಾಲೆ ಕುಟುಂಬ ಹಾಗೂ ಹೊಸಬಾಳೆ ಕುಟುಂಬದವರು ಭಾಗಿಯಾಗಲಿದ್ದಾರೆ.

ಡಿ. 12ರಂದು ವಿವಾಹವಾದ ನಂತರ, 13ರಂದು ವಧು ಪ್ರವೇಶ್ ಹಾಗೂ 14ರಂದು ಸತ್ಕಾರ ಕಾರ್ಯಕ್ರಮವನ್ನು ರಾಜರಾಜೇಶ್ವರಿ ನಗರದ ಸುಭಾಷ್ ಐಡಿಯಲ್ ಹೋಮ್​ನಲ್ಲಿ ಆಯೋಜಿಸಲಾಗಿದೆ.

ಬಾಂಗ್​ ವಿಥ್​ ಬೊಮ್ಮನ್​ ಎಂದು ಬರೆಸಲಾಗಿರುವ ವಿಶೇಷ ಲಗ್ನ ಪತ್ರಿಕೆಯನ್ನು ಒಂದು ಪುಟ್ಟ ಟ್ರೇಯಂತಿರುವ ಬಾಕ್ಸ್​ನಲ್ಲಿ ಇಡಲಾಗಿದ್ದು, ಅದರಲ್ಲಿ ಹೂವಿನೊಂದಿಗೆ ಕೆಲವು ಪರಿಸರ ಸ್ನೇಹಿ ವಸ್ತುಗಳನ್ನೂ ಇಡಲಾಗಿದೆ.

Comments are closed.