ಮನೋರಂಜನೆ

ರಜನಿಯ ‘2.0’ ಕಥೆ ಉತ್ತಮವಾಗಿರದಿದ್ದರೂ ನಾಲ್ಕೇ ದಿನಕ್ಕೆ 400 ಕೋಟಿ ರೂ. ಗಳಿಕೆ!

Pinterest LinkedIn Tumblr


ಕಥೆ ಉತ್ತಮವಾಗಿಲ್ಲದಿದ್ದರೆ ಎಂಥಾ ಸ್ಟಾರ್ ಸಿನಿಮಾ ಆದರೂ ನೆಲಕಚ್ಚಿ ಬಿಡುತ್ತದೆ. ಅದಕ್ಕೆ ತಾಜಾ ಉದಾಹರಣೆ ‘ಠಗ್ಸ್​​ ಆಫ್​ ಹಿಂದೊಸ್ತಾನ್​’. ಈ ಚಿತ್ರದಲ್ಲಿ ಆಮೀರ್​, ಅಮಿತಾಭ್​, ಕತ್ರಿನಾ ಕೈಫ್​ ಮೊದಲಾದವರು ನಟಿಸಿದ್ದರೂ, ಕಥೆ ಗಟ್ಟಿಯಾಗಿಲ್ಲ ಎನ್ನುವ ಕಾರಣಕ್ಕೆ ಸಿನಿಮಾ ನೆಲಕಚ್ಚಿತ್ತು. ಆದರೆ ರಜನಿಕಾಂತ್ ನಟನೆಯ ‘2.0’ ಮಾತ್ರ ಇದಕ್ಕೆ ಅಪವಾದ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ನಾಲ್ಕೇ ದಿನಕ್ಕೆ ಬರೋಬ್ಬರಿ​ 400 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಅಕ್ಷಯ್​ ಕುಮಾರ್​, ರಜನಿಕಾಂತ್​, ಆ್ಯಮಿ ಜಾಕ್ಸನ್​ ಮೊದಲಾದವರು ಬಣ್ಣ ಹಚ್ಚಿರುವ ಈ ಚಿತ್ರಕ್ಕೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ‘ಸಿನಿಮಾದಲ್ಲಿ ಕಥೆ ಏನು ಇಲ್ಲ’ ಎಂದು ಹೇಳಿಕೊಂಡಿದ್ದರು. ಆದಾಗ್ಯೂ ಈ ಚಿತ್ರ ನಾಲ್ಕೇ ದಿನಕ್ಕೆ ವಿಶ್ವಾದ್ಯಂತ 400 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಬಾಲಿವುಡ್​ ಒಂದರಿಂದಲೇ ‘2.0’ಗೆ 100 ಕೋಟಿ ರೂ. ಸಂದಾಯವಾಗಿದೆ. ಈ ಮೂಲಕ ಭಾರತೀಯ ಚಿತ್ರರಂಗ ಇತಿಹಾಸದಲ್ಲಿ ‘2.0’ ಹೊಸ ದಾಖಲೆ ಬರೆದಿದೆ.

ಕಥೆ ಉತ್ತಮವಾಗಿರದಿದ್ದರೂ ಸಿನಿಮಾ ಇಷ್ಟೊಂದು ಗಳಿಕೆ ಮಾಡಿದ್ದು ಹೇಗೆ? ಅದಕ್ಕೂ ಉತ್ತರವಿದೆ. ‘2.0’ ಚಿತ್ರ ಭಾರಿ ನಿರೀಕ್ಷೆ ಹುಟ್ಟುಹಾಕಿತ್ತು. ಹಾಗಾಗಿ ಸಿನಿಮಾ ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದಿದ್ದರು. ಈ ಚಿತ್ರದಲ್ಲಿ ಕಥೆಗಿಂತ ಗ್ರಾಫಿಕ್ಸ್​ ಕೆಲಸಗಳೇ ಹೈಲೈಟ್​. ಅದರ ಜತೆಗೆ 3ಡಿ ಅನುಭವ ಬೇರೆ. ಹಾಗಾಗಿ ಈ ಚಿತ್ರ ಅನಾಯಾಸವಾಗಿ 400 ಕೋಟಿ ರೂ. ಗಳಿಕೆ ಮಾಡಿಕೊಂಡಿದೆ ಎಂಬುದು ಸಿನಿಮಾ ತಜ್ಞರ ಅಭಿಪ್ರಾಯ.

Comments are closed.