ಮನೋರಂಜನೆ

ದಮಯಂತಿಗಾಗಿ ರಾಧಿಕಾ ಕುಮಾರಸ್ವಾಮಿ ಪಡೆದ ಸಂಭಾವನೆ ಕನ್ನಡ ಚಿತ್ರರಂಗದಲ್ಲೇ ಅತಿ ಹೆಚ್ಚು!

Pinterest LinkedIn Tumblr


‘ದಮಯಂತಿ’ ರಾಧಿಕಾ ಕುಮಾರಸ್ವಾಮಿ ಅಭಿನಯಿಸಿರುವ ಸಿನಿಮಾ. ಕನ್ನಡದ ಅರುಂಧತಿಯಾಗಲಿದೆ ಎಂದೇ ಹೇಳಲಾಗುತ್ತಿರುವ ಚಿತ್ರ ಇದು. ರಾಧಿಕಾ ಲುಕ್ಕು ಹಾಗೂ ಗೆಟಪ್‍ನಿಂದಲೇ ಕುತೂಹಲ ಹುಟ್ಟಿಸಿದೆ. ಇಂತಹ ಚಿತ್ರತಂಡದಿಂದ ಮತ್ತೊಂದು ಆಸಕ್ತಿಕರ ಹಾಗೂ ಶಾಕಿಂಗ್​ ಸುದ್ದಿಯೊಂದು ಹೊರ ಬಿದ್ದಿದೆ.

ರಾಧಿಕಾ ಕುಮಾರಸ್ವಾಮಿ ನಟನೆಯ ‘ದಮಯಂತಿ’ ಸಿನಿಮಾ ಅಡ್ಡದಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಇದನ್ನ ಕೇಳಿ ಗಾಂಧಿನಗರವೇ ಬೆಸ್ತು ಬಿದ್ದಿದೆ. ಅಬ್ಬಬ್ಬಾ ಅಂತ ಬಾಯಿ ಮೇಲೆ ಬೆರಳಿಟ್ಟುಕೊಂಡಿದೆ. ಅದರಲ್ಲೂ ಲಕ್ಕಿ ಸ್ಟಾರ್ ರಮ್ಯಾ, ಸದ್ಯದ ಸೆನ್ಸೇಷನ್ ರಶ್ಮಿಕಾ ಈ ಸುದ್ದಿ ಕೇಳಿ ನಿದ್ದೆಯನ್ನೇ ಮರೆತಿದ್ದಾರಂತೆ. ಇದು ನಿಜಾನಾ ಅಂತ ಸಿಕ್ಕ ಸಿಕ್ಕವರಲ್ಲಿ ವಿಚಾರಿಸುತ್ತಿದ್ದಾರಂತೆ.

ಇದನ್ನೂಓದಿ: ಕಾಶಿಯಲ್ಲಿ ಗಂಗೆಯ ಮಡಿಲು ಸೇರಿದ ಕಾವೇರಿ ಪುತ್ರ ಅಂಬಿ

ಅಷ್ಟಕ್ಕೂ ಏನಪ್ಪಾ ಆ ಸುದ್ದಿ, ಅಂತದ್ದೇನು ಅಂತೇಳೋ ಮುನ್ನಒಂದೆರಡು ವಾರ ಹಿಂದಕ್ಕೆ ಹೋಗೋಣ. ಅದು ರಶ್ಮಿಕಾ ಬಗೆಗಿನ ಸುದ್ದಿ. ಆ್ಯಕ್ಷನ್ ಪ್ರಿನ್ಸ್ ಧ್ರುವ ಜೊತೆ ಪೊಗರು ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ ಅಂತ ಎರಡು ವಾರಗಳ ಹಿಂದೆ ಸುದ್ದಿ ಆಗಿತ್ತು. ಅದರ ಬೆನ್ನಲ್ಲೇ ರಶ್ಮಿಕಾ ಪೊಗರು ಚಿತ್ರಕ್ಕಾಗಿ 63 ಲಕ್ಷ ಸಂಭಾವನೆ ಪಡೆಯುತ್ತಿರುವುದು ಸುದ್ದಿಯಾಗಿತ್ತು.

`ಪೊಗರು’ ಚಿತ್ರಕ್ಕಾಗಿ ರಶ್ಮಿಕಾ ಪಡೆದಿದ್ದೆಷ್ಟು ?

ರಶ್ಮಿಕಾಗೂ ಮುನ್ನ 60 ಲಕ್ಷಕ್ಕೂ ಹೆಚ್ಚು ಸಂಭಾವನೆ ಪಡೆದವರಲ್ಲಿ ರಮ್ಯಾ ಹೆಸರು ಮಾತ್ರ ಇತ್ತು. ರಮ್ಯಾ ಒಂದು ಕಾಲಕ್ಕೆ ಸ್ಯಾಂಡಲ್‍ವುಡ್‍ನ ಲಕ್ಕಿ ಸ್ಟಾರ್ ಆಗಿದ್ದವರು. ಅವರಿದ್ದರೆ ಸಿನಿಮಾ ಹಿಟ್ ಅನ್ನೋದು ಗಾಂಧಿನಗರದಲ್ಲಿ ಮಾತಾಗಿತ್ತು. ಅದು ಕೃತಿಯಾಗಿ ಸಹ ಸಾಬೀತಾಗಿತ್ತು. ಹೀಗಾಗಿ ರಮ್ಯಾ ಸ್ಯಾಂಡಲ್‍ವುಡ್‍ಗೆ ಒಬ್ಬರೇ ಪದ್ಮಾವತಿ ಎನ್ನುವಂತಾಗಿತ್ತು.

ಆರ್ಯನ್‍ಗಾಗಿ ಪದ್ಮಾವತಿಗೆ ಸಿಕ್ಕಿತ್ತು ಬಿಗ್ ಅಮೌಂಟ್ !

ರಮ್ಯಾ ಪೀಕ್‍ನಲ್ಲಿದ್ದಾಗ ಅವರ ಕಾಲ್‍ಶೀಟ್ ಸಿಕ್ಕರೆ ಸಾಕಾಗಿತ್ತು. ಅವರು ಕೇಳಿದಷ್ಟು ಸಂಭಾವನೆಯನ್ನ ನಿರ್ಮಾಪಕರು ಕೊಡುತ್ತಿದ್ದರು. 2014ರಲ್ಲಿ ನಿರ್ಮಾಪಕ ಕಮರ್ ಅವರಿಗೆ ಶಿವರಾಜ್‍ಕುಮಾರ್ ಹಾಗೂ ರಮ್ಯಾರನ್ನ ಜೊತೆಯಾಗಿಸೋ ಯೋಚನೆ ಬಂದಿತ್ತು. ಇದನ್ನ ರಮ್ಯಾ ಮುಂದಿಟ್ಟಾಗ ರಮ್ಯಾ ದೊಡ್ಡ ಸಂಭಾವನೆಗೇ ಬೇಡಿಕೆ ಇಟ್ಟಿದ್ದರಂತೆ. ಅದಕ್ಕೆ ಕಮಕ್ ಕಿಮಕ್ ಅನ್ನದೇ ಓಕೆ ಅಂದಿದ್ದರು ಕಮರ್. ಅದರಂತೆ ರಮ್ಯಾಗೆ ‘ಆರ್ಯನ್’ ಚಿತ್ರಕ್ಕಾಗಿ ಕೊಟ್ಟಿದ್ದ ಸಂಭಾವನೆ ಅಷ್ಟಿಷ್ಟಲ್ಲ. ಬರೋಬ್ಬರಿ 66 ಲಕ್ಷವನ್ನ ರಮ್ಯಾಗಾಗಿ ಕೊಡಲಾಗಿತ್ತು.

ಈಗ ‘ದಮಯಂತಿ’ ಅವತಾರದಲ್ಲಿ ಬಣ್ಣ ಹಚ್ಚಿರೋ ರಾಧಿಕಾ ಇವರಿಬ್ಬರೂ ಸೈಡು ಹೊಡೆದಿದ್ದಾರೆ. ಸದ್ಯಕ್ಕೆ ಸ್ಯಾಂಡಲ್‍ವುಡ್‍ಗೆ ನಾನೇ ಅರಸಿ ಅನ್ನೋದನ್ನ ‘ದಮಯಂತಿ’ಯಾಗಿ ಸಾಬೀತು ಮಾಡಿದ್ದಾರೆ.

ಹೌದು, ದಮಯಂತಿ ಪಾತ್ರಕ್ಕೆ ರಾಧಿಕಾ ಪಡೆದಿರೋ ಸಂಭಾವನೆ ಬರೋಬ್ಬರಿ ಒಂದು ಕೋಟಿಯಂತೆ. ಆದರೆ ಅಧಿಕೃತವಾಗಿ ಇಷ್ಟೇ ದುಡ್ಡು ಅಂತ ಹೇಳಲಿಲ್ಲ ಅಂದ್ರೂ, ನಾವು ರಾಧಿಕಾಗೆ ಸ್ಯಾಂಡಲ್‍ವುಡ್ ನಟಿಯರಲ್ಲೇ ಅತಿ ದೊಡ್ಡ ಸಂಭಾವನೆ ಕೊಟ್ಟಿದ್ದೇವೆ ಅಂತಾರೆ ನಿರ್ದೇಶಕ ನವರಸನ್.

ತೆಲುಗಿನ ‘ಅರುಂಧತಿ’, ‘ಭಾಗಮತಿ’ ರೇಂಜ್‍ನಲ್ಲಿ ತಯಾರಾಗುತ್ತಿರೋ ಚಿತ್ರ. ಈಗಾಗಲೇ ಕೇವಲ ರಾಧಿಕಾ ಲುಕ್‍ನಿಂದಲೇ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿರುವ ಈ ಸಿನಿಮಾ, ಯಾವ ಮಟ್ಟದಲ್ಲಿ ಮೂಡಿಬರಲಿದೆ ಅನ್ನೋದಕ್ಕೆ ಉದಾರಹಣೆಯಂತಿದೆ ಈ ಚಿತ್ರದ ಟೀಸರ್​.

Comments are closed.