ಮನೋರಂಜನೆ

ಚಿರಂಜೀವಿ ಜೊತೆ ನಾಗಕನ್ನಿಕೆಯ ರೊಮ್ಯಾನ್ಸ್!

Pinterest LinkedIn Tumblr


ಬೆಂಗಳೂರು: ಕಿರುತೆರೆಯಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದ ನಾಗಕನ್ನಿಕೆ ಧಾರಾವಾಹಿಯಿಂದಲೇ ಖ್ಯಾತಿ ಪಡೆದಿರುವವರು ಅದಿತಿ ಪ್ರಭುದೇವ್. ನಾಗಕನ್ನಿಕೆಯಾಗಿದ್ದುಕೊಂಡು ನಾಯಕಿಯಾಗಿಯೂ ನರ್ತನ ಶುರುವಿಟ್ಟುಕೊಂಡಿರೋ ಅವರೀಗ ಚಿರಂಜೀವಿ ಸರ್ಜಾ ಜೊತೆ ರೊಮ್ಯಾನ್ಸ್ ಮಾಡಲು ಅಣಿಯಾಗುತ್ತಿದ್ದಾರೆ!

ಅದಿತಿ ಸುನಿ ನಿರ್ದೇಶನದಲ್ಲಿ ಮೂಡಿ ಬರಲಿರೋ, ಚಿರಂಜೀವಿ ಸರ್ಜಾ ನಾಯಕನಾಗಿರುವ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಈ ಚಿತ್ರಕ್ಕೆ ಇನ್ನಷ್ಟೇ ಟೈಟಲ್ ನಿಗದಿಯಾಗಬೇಕಿದೆ. ತಾರಾಗಣದ ಆಯ್ಕೆ ಕಾರ್ಯ ಸದ್ಯ ಚಾಲ್ತಿಯಲ್ಲಿದೆ. ಆದರೆ ಅದಾಗಲೇ ಅದಿತಿ ನಾಯಕಿಯಾಗಿ ಫಿಕ್ಸಾಗಿದ್ದಾರೆ.

ನಾಗಕನ್ನಿಕೆಯಾಗಿದ್ದ ಅದಿತಿ ಧೈರ್ಯಂ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅಜೇಯ್ ರಾವ್ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ಅದಿತಿ ಪಾತ್ರವೂ ಗಮನ ಸೆಳೆದಿತ್ತು. ಅದಾದ ನಂತರ ಬೇಡಿಕೆಯಲ್ಲಿರೋ ಅದಿತಿಗೀಗ ಚಿರುಗೆ ನಾಯಕಿಯಾಗೋ ಅವಕಾಶ ಕೂಡಿ ಬಂದಿದೆ.

Comments are closed.