ಮನೋರಂಜನೆ

ಸಲ್ಮಾನ್ ತಂದೆಗೆ ಬೆದರಿಕೆ ಹಾಕಿದ ಶಾರುಖ್ ಖಾನ್ ಬಂಧನ

Pinterest LinkedIn Tumblr


ಶಾರುಖ್​ಗೆ ಸಲ್ಮಾನ್​ ಖಾನ್​ ಜೊತೆ ನಟಿಸಬೇಕಂತೆ! ಇದಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಸಲ್ಮಾನ್​ ಖಾನ್​ ತಂದೆ ಸಲೀಮ್​ ಖಾನ್​ ಹಿಂದೆ ಬಿದ್ದಿದ್ದಾರೆ ಶಾರುಖ್​! ಈ ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಬೆದರಿಕೆ ಹಾಕಿದ ಆರೋಪದ ಮೇಲೆ ಶಾರುಖ್​ ಅರೆಸ್ಟ್​ ಆಗಿದ್ದಾರೆ!

ನಿಜಕ್ಕೂ ಶಾರುಖ್​ ಬಂಧನಕ್ಕೊಳಗಾದರಾ? ಅಸಲಿಗೆ ನಾವು ಹೇಳುತ್ತಿರುವುದು ಬಾಲಿವುಡ್ ಹೀರೋ ಶಾರುಖ್​ ಕಥೆಯನ್ನಲ್ಲ. ಉತ್ತರ ಪ್ರದೇಶದ ಪ್ರಯಾಗ್​ರಾಜ್​ ಪ್ರದೇಶದ ಶಾರುಖ್​ ಗುಲಾಮ್​ ನಬಿಯ ಕಥೆ. ಈತನಿಗೆ ಸಲ್ಮಾನ್​ ಜತೆ ನಟಿಸುವಾಸೆ. ಇದೇ ಕಾರಣಕ್ಕೆ ಅವನು ಸಿಕ್ಕ ಸಿಕ್ಕವರ ಕಾಲು ಹಿಡಿದಿದ್ದ. ಅವರಿಗೆ ವಿಪರೀತ ಕಿರಿಕಿರಿ ಉಂಟು ಮಾಡಿದ್ದ. ಈ ತಪ್ಪಿಗೆ ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಸಲ್ಮಾನ್​ ಖಾನ್​ ಆಪ್ತ ಸಹಾಯಕ ಬಿಬಾಶ್​ ಚಾಯಾ ಅವರ ದೂರವಾಣಿ ಸಂಖ್ಯೆಯನ್ನು ಹುಡುಕಿ ಕರೆ ಮಾಡಿ ಸಲ್ಲು ಜತೆ ನಟಿಸಲು ಒಂದು ಚಾನ್ಸ್​​ ನೀಡುವಂತೆ ಕೇಳಿದ್ದಾನೆ ಶಾರುಖ್​. ಆದರೆ ಶಾರುಖ್​ಗೆ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ಈ ವೇಳೆ ಆತ ಸಲ್ಲು ತಂದೆ ಸಲೀಮ್​ ಖಾನ್​ಗೆ ಕರೆ ಮಾಡಿದ್ದ. ಅಷ್ಟೇ ಅಲ್ಲ, ‘ನಾನು ಭೂಗತ ಪಾತಕಿ ಛೋಟಾ ಶಕೀಲ್​ ಬಳಿ ಕೆಲಸ ಮಾಡುತ್ತೇನೆ. ಚಾನ್ಸ್​​ ನೀಡದೇ ಇದ್ದರೆ ಹುಶಾರ್​ ಎಂದು’ ಬೆದರಿಕೆಯನ್ನೂ ಹಾಕಿದ್ದ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲು ಪಿಎ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಶಾರುಖ್​ನನ್ನು ಬಂಧಿಸಿದ್ದಾರೆ. ಸದ್ಯ ಆತ ಪೊಲೀಸರ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ.

Comments are closed.