ಮನೋರಂಜನೆ

ತಂದೆಯಾಗುವ ಸಂಭ್ರಮದಲ್ಲಿ ರಿಷಬ್ ಶೆಟ್ಟಿ

Pinterest LinkedIn Tumblr


ಸ್ಯಾಂಡಲ್‍ವುಡ್ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಸಿಹಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಹೌದು! ತಾವು ತಂದೆಯಾಗುತ್ತಿರುವ ಖುಷಿ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಈ ಕುರಿತು ಫೇಸ್‍ಬುಕ್‍ನಲ್ಲಿ ಮಡದಿಯೊಂದಿಗಿರುವ ಫೋಟೋ ಪೋಸ್ಟ್ ಮಾಡಿರುವ ರಿಷಬ್, “ಪ್ರಗತಿ ರಿಷಬ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಪ್ರೆಸೆಂಟ್ಸ್ ಪ್ರೊಡಕ್ಷನ್ ನಂ. 1′ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ತಾವು ತಂದೆಯಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಂದ ಹಾಗೇ 2017ರ ಫೆಬ್ರವರಿಯಲ್ಲಿ ರಿಷಬ್ ಶೆಟ್ಟಿ-ಪಗ್ರತಿ ಅವರ ಮದುವೆ ನಡೆದಿತ್ತು.

ಇನ್ನು “ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ರಿಷಬ್, “ಸರ್ಕಾರಿ ಹಿ. ಪ್ರಾ. ಶಾಲೆ ಕಾಸರಗೋಡು’ ಸಿನಿಮಾ ಮೂಲಕ ಜಾದೂ ಮಾಡಿದ್ದಾರೆ. ಈ ಚಿತ್ರದಲ್ಲಿ ರಿಷಬ್, ಮಕ್ಕಳ ಮೂಲಕ ಕನ್ನಡ ಪ್ರೀತಿಯನ್ನು ಮೆರೆದಿದ್ದರು. ಇದೀಗ ತಮ್ಮ ಮನೆಗೆ ಮಗುವೊಂದನ್ನು ಆಹ್ವಾನಿಸಲು ರಿಷಬ್ ತುದಿಗಾಲಲ್ಲಿ ನಿಂತಿದ್ದಾರೆ.

Comments are closed.