ಮನೋರಂಜನೆ

ಸಾರ್ವಕಾಲಿಕ ದಾಖಲೆ ಮುರಿದ ‘ಥಗ್ಸ್ ಆಫ್ ಹಿಂದುಸ್ಥಾನ್’ ಚಿತ್ರ ! ಮೊದಲ ದಿನದ ಗಳಿಕೆ ಎಷ್ಟು ಗೊತ್ತೇ…?

Pinterest LinkedIn Tumblr

ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ, ಅಮಿತಾಭ್ ಬಚ್ಚನ್, ಆಮೀರ್ ಖಾನ್ ನಟನೆಯ ‘ಥಗ್ಸ್ ಆಫ್ ಹಿಂದುಸ್ಥಾನ್’ ಚಿತ್ರ ಗುರುವಾರ ಜಗತ್ತಿನಾದ್ಯಂತ 7000ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ತೆರೆಕಂಡಿದೆ.

ಅಭಿಮಾನಿ ವಲಯದಲ್ಲೂ ಪೋಸ್ಟರ್, ಟ್ರೇಲರ್, ಮೇಕಿಂಗ್ ವಿಡಿಯೋಗಳ ಮೂಲಕವೇ ಹೆಚ್ಚು ನಿರೀಕ್ಷೆ ಹುಟ್ಟುಹಾಕಿತ್ತು. ಇದೀಗ ಇದೇ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ. ಬರೋಬ್ಬರಿ 50 ಕೋಟಿ ರೂ. ಗಳಿಸುವ ಮೂಲಕ ಸಾರ್ವಕಾಲಿಕ ದಾಖಲೆ ಮಾಡಿದೆ!

ವಿಮರ್ಶಕರ ದೃಷ್ಟಿಯಿಂದ ಋಣಾತ್ಮಕ ಅಭಿಪ್ರಾಯ ಪಡೆದುಕೊಂಡಿದ್ದ ಚಿತ್ರ, ಗಳಿಕೆ ವಿಚಾರದಲ್ಲಿ ಹೆಚ್ಚು ಸದ್ದು ಮಾಡಿದೆ. ಅಷ್ಟೇ ಅಲ್ಲ, ಈ ಹಿಂದಿನ ಮೊದಲ ದಿನದ ಗಳಿಕೆಯ ಹಲವು ದಾಖಲೆಗಳನ್ನು ‘ಥಗ್ಸ್..’ ಮುರಿದಿದೆ. ಸಲ್ಮಾನ್ ಖಾನ್ ನಟಿಸಿದ್ದ ‘ಪ್ರೇಮ ರತನ್ ಧನ್ ಪಾಯೋ’ ಚಿತ್ರ 39. 32 ಕೋಟಿ ರೂ. ಗಳಿಕೆ ಮಾಡಿತ್ತು. ‘ಬಾಹುಬಲಿ-2’ 40.73 ಕೋಟಿ ರೂ. ಬಾಚಿಕೊಂಡಿತ್ತು. ಇದೀಗ ಈ ಎರಡೂ ಚಿತ್ರಗಳನ್ನು ಮೀರಿ ನಿಂತಿದೆ ‘ಥಗ್ಸ್..’. ‘ಬಾಹುಬಲಿ 2’ ಮತ್ತು ಹಾಲಿವುಡ್​ನ ‘ಅವೆಂಜರ್ಸ್- ಇನ್ಪಿನಿಟಿ ವಾರ್’ ಸಿನಿಮಾಗಳು ಮುಂಗಡ ಟಿಕೆಟ್ ಬುಕ್ಕಿಂಗ್ ಮೂಲಕವೇ ದಾಖಲೆ ಮಾಡಿದ್ದವು. ಇದೀಗ ಆ ಪೈಕಿ ಮೂರನೇ ಚಿತ್ರವಾಗಿ ‘ಥಗ್ಸ್..’ ಸೇರ್ಪಡೆಗೊಂಡಿದೆ. ಮುಂಗಡ ಟಿಕೆಟ್​ನಿಂದಲೇ 27 ಕೋಟಿ ರೂ. ಗಳನ್ನು ‘ಥಗ್ಸ್..’ ಚಿತ್ರ ಗಳಿಸಿದೆ.

ಶುಕ್ರವಾರ ಮುಗಿಯುವುದರೊಳಗೆ ನಿರಾಯಾಸವಾಗಿ 100 ಕೋಟಿಯ ಗಡಿ ತಲುಪಲಿದೆ ಎಂಬುದು ಬಾಲಿವುಡ್ ಪಂಡಿತರ ಲೆಕ್ಕಾಚಾರ. ಈ ಮಧ್ಯೆ ‘ಥಗ್ಸ್..’ ಚಿತ್ರದ ಪೈರಸಿ ಕಾಪಿ ಇಂಟರ್​ನೆಟ್​ನಲ್ಲಿ ಹರಿದಾಡುತ್ತಿರುವುದು ಬೇಸರದ ಸಂಗತಿ.

Comments are closed.