ಮನೋರಂಜನೆ

ನಟ ವಿನೋದ್ ರಾಜ್’ರನ್ನು ಯಮಾರಿಸಿ 1 ಲಕ್ಷ ದರೋಡೆ ಮಾಡಿದ್ದ ಖದೀಮ ಪೊಲೀಸ್ ಬಲೆಗೆ

Pinterest LinkedIn Tumblr

ಬೆಂಗಳೂರು: ನಟ ವಿನೋದ್ ರಾಜ್ ಅವರನ್ನು ಯಮಾರಿಸಿ 1 ಲಕ್ಷ ದರೋಡೆ ಮಾಡಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ತಿಂಗಳು ಅಭಿಮಾನಿಗಳ ಸೋಗಿನಲ್ಲಿ ಬಂದು ನಟ, ವಿನೋದ್ ರಾಜ್ ಅವರನ್ನು ಮಾತನಾಡಿಸುತ್ತಲೇ ಕಾರು ಪಂಚರ್ ಮಾಡಿದ್ದರು, ಕಾರಿನಲ್ಲಿದ್ದ 1 ಲಕ್ಷ ಹಣವನ್ನ ಖದೀಮರು ಕದ್ದು ಎಸ್ಕೇಪ್ ಆಗಿದ್ದರು.

ಓಜಿಕುಪ್ಪಂ ಗ್ಯಾಂಗ್ ಬೆನ್ನಟ್ಟಿದ್ದ ನೆಲಮಂಗಲ ಪೊಲೀಸರು ಕೊನೆಗೆ ಹೈಟೆಕ್ ರಾಜುನನ್ನ ಬಂಧಿಸಿದ್ದಾರೆ.

ಬಂಧಿತ ರಾಜು ಅಲಿಯಾಸ್ ಹೈಟೆಕ್ ರಾಜು ಐಷಾರಾಮಿ ಜೀವನ ಮಾಡುತ್ತಿದ್ದ. ಬಂಧಿತನನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು ಆತನ ಗ್ಯಾಂಗ್ ನ ಇತರ ಸದಸ್ಯರನ್ನು ಬಂಧಿಸಿಲು ಬಲೆ ಬೀಸಿದ್ದಾರೆ.

ನೆಲಮಂಗಲ ಸಿಪಿಐ ಅನಿಲ್ ಕುಮಾರ್ ನೇತೃತ್ವದ ತಂಡ ಬಲೆ ಬೀಸಿದೆ. ಆರೋಪಿ ಬಂಧನದಿಂದ ನಟ ವಿನೋದ್ ರಾಜ್ ಸಂತಸ ವ್ಯಕ್ತಪಡಿಸಿದ್ದು, ಮುಂದೆ ಈ ಖದೀಮರ ಗ್ಯಾಂಗ್ ಯಾರಿಗೂ ದ್ರೋಹ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

Comments are closed.